Header Ads
Breaking News

ಭಾರೀ ಮಳೆ ಹಿನ್ನೆಲೆ : ದೇರೆಬೈಲ್‍ನಲ್ಲಿರುವ ಎಸ್ಸೆಲ್ ಲೈಟ್ಸ್ ಬಿಲ್ಡಿಂಗ್‍ನ ಕಂಪೌಂಡ್ ಕುಸಿತ

ಕರಾವಳಿಯಾದ್ಯಂತ ಎರಡು ದಿನಗಳಿಂದ ಎಡೆಬಿಡದೆ ಭಾರೀ ಮಳೆಯಾಗ್ತಾ ಇದ್ದು, ನಗರದ ಹಲವೆಡೆ ಭಾರೀ ಹಾನಿ ಸಂಭವಿಸಿದೆ. ಅಂತೆಯೇ ನಗರದ ದೇರೆಬೈಲ್‍ನಲ್ಲಿರುವ ಎಸ್ಸೆಲ್ ಲೈಟ್ಸ್ ಬಿಲ್ಡಿಂಗ್ ಹಿಂಭಾಗದ ಕಂಪೌಂಡ್ ಕುಸಿದಿದ್ದು, ಭಾರೀ ಹಾನಿ ಸಂಭವಿಸಿದೆ. ಈ ವೇಳೆ ಪಾರ್ಕಿಂಗ್‍ನಲ್ಲಿದ್ದ ಕೆಲವು ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಸದ್ಯ ಫ್ಲ್ಯಾಟ್‍ನಲ್ಲಿದ್ದ ಜನರನ್ನು ಸ್ಥಳಾಂತರಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿದ್ದು ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ಭಾರೀ ಮಳೆಯ ಹಿನ್ನೆಲೆ ಹವಾಮಾನ ಇಲಾಖೆ ಕರಾವಳಿಯಾದ್ಯಂತ ಇಂದು ನಾಳೆ ರೆಡ್ ಅಲರ್ಟ್‍ನ್ನು ಘೋಷಣೆ ಮಾಡಿದೆ.

Related posts

Leave a Reply

Your email address will not be published. Required fields are marked *