Header Ads
Breaking News

ಭಾರೀ ಸದ್ದು ಮಾಡುತ್ತಿದೆ “ನಮಸ್ತೆ ಭಾರತ ವಾರಿಯರ್ಸ್ ಹಾಡು” : ಕಾರ್ಗಿಲ್ ವಿಜಯ ದಿವಸ್ ಹಿನ್ನಲೆಯಲ್ಲಿ ಬಿಡುಗಡೆ

ಕಾರ್ಗಿಲ್ ವಿಜಯ ದಿವಸ್ ಹಿನ್ನಲೆ ಯೋಧ ಕ್ರಿಯೇಷನ್ ಅಡಿಯಲ್ಲಿ ನಿರ್ಮಾಣವಾದ ನಮಸ್ತೆ ಭಾರತ ವಾರಿಯರ್ಸ್ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ದೇಶದ ಸೈನಿಕರು, ರೈತರು ಹಾಗೂ ವಾರಿಯರ್ಸ್‍ಗಳನ್ನು ಅಭಿನಂದಿಸಲು ಯೋಧ ಕ್ರಿಯೇಷನ್ ಈ ಹಾಡನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದೆ. ನವೀನ್ ಗೌಡ ಕಾಯರ್ತಡ್ಕ ಇವರ ನಿರ್ಮಾಣದ ಈ ಹಾಡಿಗೆ ಸ್ವತಃ ಇವರೇ ಸಾಹಿತ್ಯವನ್ನು ಬರೆದು ಹಾಡಿದ್ದಾರೆ. ಇನ್ನು ಸಂಗೀತವನ್ನು ಧೀರಾಜ್ ಸಾಥ್ ನೀಡಿದ್ರೆ, ಟೆಂಪಲ್ ಸೌನ್ಡ್ ಅವರು ಸಂಕಲನದಲ್ಲಿ ಕೈ ಜೋಡಿಸಿದ್ದಾರೆ. ಇನ್ನು ಯೂ ಟ್ಯೂಬ್‍ನಲ್ಲಿ ಬಿಡುಗಡೆಗೊಂಡ ಕೆಲವೇ ಕ್ಷಣದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

 

Related posts

Leave a Reply

Your email address will not be published. Required fields are marked *