Header Ads
Header Ads
Breaking News

ಮಂಗಳೂರಲ್ಲಿ ನವೀಕೃತ ಫಿಲಾಟೆಲಿ ಬ್ಯೂರೊ ಉದ್ಘಾಟನೆ

ಸಂಪೂರ್ಣ ನವೀಕರಣಗೊಂಡ ಹವಾನಿಯಂತ್ರಿತ ವ್ಯವಸ್ಥೆಯನ್ನ ಹೊಂದಿರುವ ಫಿಲಾಟೆಲಿಕ್ ಬ್ಯೂರೋ ಇಂದು ಮಂಗಳೂರಿನ ಪ್ರಧಾನ ಅಂಚೆ ಕಚೇರಿಯಲ್ಲಿ ಉದ್ಘಾಟನೆಗೊಂಡಿತು.ಕಾರ್ಯಕ್ರಮವನ್ನು ಕರ್ನಾಟಕ ವೃತ್ತದ ಚೀಫ್ ಫೋಸ್ಟ್ ಮಾಸ್ಟರ್ ಜನರಲ್ ಡಾ|ಚಾರ್ಲ್ಸ್ ಲೋಬೋ ಅವರು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ದಿ ರೂವಾರಿಯಾಗಿರುವ ಶ್ರೀನಿವಾಸ್ ಮಲ್ಯ ಅವರ ಫೋಟೋ ಅನ್ನು ಅಂಚೆ ಚೀಟಿಯಲ್ಲಿ ನಮೂದಿಸದೇ ಇರುವುದು ಬೇಸರದ ಸಂಗತಿ. ಈ ಬಗ್ಗೆ ಜಿಲ್ಲೆಯ ಸಂಸದರು, ಶಾಸಕರು ಗಮನಹರಿಸಬೇಕೆಂದು ಅವರು ಹೇಳಿದರು.

ಇನ್ನು ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರಕುಮಾರ್ ಅವರು ಮಾತನಾಡಿ, ಮಂಗಳೂರು ಬ್ಯೂರೋ ನವೀಕರಣಗೊಂಡಿರುವುದರಿಂದ ಇದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರಿಗೆ ಹಾಗೂ ಅಂಚೆ ಚೀಟಿ ಸಂಗ್ರಹ ಆಸಕ್ತರಿಗೆ ಸುವರ್ಣಾವಕಾಶವನ್ನು ಕಲ್ಪಿಸಿದೆ ಎಂದು ಅವರು ತಿಳಿಸಿದರು. ಈ ವೇಳೆ ಮಂಗಳೂರು ಹಿರಿಯ ಅಂಚೆ ಅಧೀಕ್ಷಕರಾದ ಶ್ರೀಹರ್ಷ ಎಸ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *