Header Ads
Breaking News

ಮಂಗಳೂರಲ್ಲಿ ಮೇಳೈಸಿದ ಕರಾವಳಿ ಜಾನಪದ ಜಾತ್ರೆ

ಮಂಗಳೂರು:  ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಂಡ ಕರಾವಳಿ ಜಾನಪದ ಜಾತ್ರೆಗೆ ಚಾಲನೆ ಸಿಕ್ಕಿತ್ತು. ಇನ್ನು ತುಳುನಾಡಿನ ಕೈಗಾಡಿ, ಎತ್ತಿನಗಾಡಿ, ಕಂಬಳ, ಕೋಳಿ ಅಂಕ, ಭತ್ತ ಕುಟ್ಟುವುದು, ದೈವರಾಧನೆ, ನಾಗರಾಧನೆ, ಯಕ್ಷಗಾನ, ಬೆಸ್ತರ ಪ್ರತಿಕೃತಿಗಳು ಜಾನಪದ ಲೋಕದಲ್ಲಿ ಗಮನ ಸೆಳೆದವು.

ವಾಓ01: ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಘಟಕ ವತಿಯಿಂದ ನಡೆದ ಕರಾವಳಿ ಜಾನಪದ ಜಾತ್ರೆಗೆ ಅದ್ಧೂರಿಯಾಗಿ ಚಾಲನೆ ಸಿಕ್ಕಿತ್ತು. ಇನ್ನು ಜಾನಪದ ಜಾತ್ರೆಯನ್ನ ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಅವರು ಉದ್ಘಾಟಿಸಿದ್ರು. ಬಳಿಕ ಮಾತನಾಡಿದ ಅವರು, ಜನಪದ ಎನ್ನುವುದು ಜಾತಿ, ಮತ, ಧರ್ಮಗಳನ್ನು ಮೀರಿದ ಸಂಸ್ಕøತಿ. ಜನಪದ ಜನಮಾನಸದಲ್ಲಿ ನಿರಂತರವಾಗಿ ಉಳಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾದ ಕರ್ತವ್ಯವಿದೆ ಎಂದು ಅವರು ಹೇಳಿದ್ರು.


ಈ ಸಂದರ್ಭ ಪದ್ಮಶ್ರೀ ಹರೇಕಳ ಹಾಜಬ್ಬ ಶಿಕ್ಷಣ ಕ್ಷೇತ್ರ, ಸೇಸಪ್ಪ ಪಂಬದ ದೈವರಾಧನೆ , ಹಾಗೂ ಸಂದೀಪ್ ಆಚಾರ್ಯ ಶಿಲ್ಪಕಲೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ವೇದಿಕೆಯಲ್ಲಿ ಗಣ್ಯರು ಸನ್ಮಾನಿಸಿದ್ರು.

ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್. ಅಂಗಾರ, ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ದಿವಾಕರ ಪಾಂಡೇಶ್ವರ, ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು ಇದರ ರಾಜಾಧ್ಯಕ್ಷ ತಿಮ್ಮೇಗೌಡ, ಕರ್ನಾಟಕ ಜಾನಪದ ಪರಿಷತ್ ಮುಂಬಯಿ ಇದರ ಅಧ್ಯಕ್ಷ ಡಾ.ಆರ್.ಕೆ. ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್ ದ.ಕ. ಜಿಲ್ಲಾ ಘಟಕ ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್‍ಬೈಲ್, ದ.ಕ.ಜಿ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಾಸರಗೋಡು ಘಟಕದ ಅಧ್ಯಕ್ಷ ಎ.ಆರ್.ಸುಬ್ಬಯ್ಯ ಕಟ್ಟೆ, ಬಿಜೆಪಿಯ ಸಂತೋಷ್ ಕುಮಾರ್ ಬೋಳಿಯಾರ್, ಚಿತ್ರ ನಿರ್ಮಾಪಕ ತಾರಾನಾಥ್ ಶೆಟ್ಟಿ ಬೋಳಾರ, ತುಳು ಚಿತ್ರ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‍ಬೈಲ್ , ಕಾರ್ಯದರ್ಶಿ ಲಕ್ಷ್ಮೀಶ್ ಸುವರ್ಣ, ಮಂಗಳೂರು ತಾಲೂಕು ಅಧ್ಯಕ್ಷ ಅರುಣ್ ಉಳ್ಳಾಲ್, ಪದಾಧಿಕಾರಿಕಾರಿಗಳಾದ ಅಸ್ಗರ್ ಮುಡಿಪು, ಮೋಹನ್ ದಾಸ್ ರೈ, ಮೊದಲಾದವರು ಉಪಸ್ಥಿತರಿದ್ದರು.


ವಾಓ03: ಸಭಾ ಕಾರ್ಯಕ್ರಮಕ್ಕೂ ಮೊದಲು ಜಾನಪದ ಜಾತ್ರೆಯ ಮೆರವಗೆ ನಗರದ ನೆಹರೂ ಮೈದಾನದಿಂದ ಪುರಭವನದವರೆಗೂ ನಡೆಯಿತು. ಮೆರವಣಿಗೆಯಲ್ಲಿ ಚಿಲಿಪಿಲಿ ಗೊಂಬೆಗಳು, ತುಳುನಾಡಿನ ಹುಲಿವೇಷ, ಕಂಗೀಲು ನೃತ್ಯ, ಚೆಂಡೆ ತಂಡ, ಪುಟಾ ಮಕ್ಕಳ ಭಜನೆ ತಂಡದ ಪ್ರದರ್ಶನಗಳು ಎಲ್ಲರ ಗಮನ ಸೆಳೆಯಿತು. ಗಣ್ಯರನ್ನು ಮೆರವಗೆಯ ಮೂಲಕ ಕರೆ ತರಲಾಯಿತು. ತುಳುನಾಡಿನ ಕೈಗಾಡಿ, ಎತ್ತಿನಗಾಡಿ, ಕಂಬಳ, ಕೋಳಿ ಅಂಕ, ಭತ್ತ ಕುಟ್ಟುವುದು, ದೈವರಾಧನೆ, ನಾಗರಾಧನೆ, ಯಕ್ಷಗಾನ, ಬೆಸ್ತರ ಪ್ರತಿಕೃತಿಗಳು ಜಾನಪದ ಲೋಕದಲ್ಲಿ ಮೆಚ್ಚುಗೆ ಗಳಿಸಿತು. ಹಿರಿಯರು ತಮ್ಮ ಹಿಂದಿನ ಬದುಕಿನ ವಿಚಾರಗಳನ್ನು ಕಿರಿಯರಿಗೆ ಹೇಳಿಕೊಡುತ್ತಿದ್ದ ದೃಶ್ಯಗಳು ಕಾಸಿಕೊಂಡಿತು.

Related posts

Leave a Reply

Your email address will not be published. Required fields are marked *