ಮಂಗಳೂರು ನಗರದಲ್ಲಿ ಉಗ್ರ ಪರ ಗೋಡೆ ಬರಹ ಬರೆದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸ್ರು ಬಂಧಿಸಿದ್ದಾರೆ. ಆರೋಪಿಯನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಜೀರ್ ಎಂದು ಗುರುತಿಸಲಾಗಿದೆ.
ನವೆಂಬರ್ 27ರಂದು ನಗರದ ಬಿಜೈ ಮ್ಯೂಸಿಯಂ ಬಳಿಯ ಫ್ಲಾಟ್ ಒಂದರ ಅವರಣದ ಗೋಡೆಯ ಹೊರ ಭಾಗದಲ್ಲಿ ಲಷ್ಕರ್ ಉಗ್ರರನ್ನು ಬೆಂಬಲಿಸಿ ಬರೆಯಲಾಗಿತ್ತು. ಇದಾದ ಎರಡು ದಿನಗಳ ನಂತರ ಅಂದರೆ ನ.29 ಮಂಗಳೂರಿನ ಕೋರ್ಟ್ ರಸ್ತೆಯ ಕೋರ್ಟ್ ಆವರಣದಲ್ಲಿರುವ ಪೊಲೀಸ್ ಔಟ್ ಪೊಸ್ಟ್ ಕಟ್ಟಡದ ಮೇಲೆ ಉರ್ದು ಭಾಷೆಯಲ್ಲಿ ವಿವಾದಾತ್ಮಕ ಬರಹ ಬರೆಯಲಾಗಿತ್ತು. ನಗರ ಪೊಲೀಸರಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದ ಪ್ರಕರಣದ ತನಿಖೆ ನಡೆಸಿದ ಇದೀಗ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ತೀರ್ಥಹಳ್ಳಿ ಮೂಲದವನಾದ ಆರೋಪಿಯನ್ನು ಮೊಬೈಲ್ ದಾಖಲೆಗಳ ಆಧಾರದಲ್ಲಿ ಸೆರೆಹಿಡಿಯಲಾಗಿದೆ.