
ರಖಂ ಮತ್ತು ಚಿಲ್ಲರೆ ದಿನಸಿ ಬಳಕೆ ಸಮಾಗ್ರಿಗಳ ಬಶೀರ್ ಕಲ್ಕಟ್ಟ ಮಾಲಕತ್ವದ ಮಳಿಗೆ ಎಚ್.ಎಚ್ ಸೂಪರ್ ಬಝಾರ್ ಮಂಗಳೂರು ನಗರದ ಫಳ್ನೀರ್ ಅಥೆನಾ ಆಸ್ಪತ್ರೆಯ ಸಮೀಪ ಉದ್ಘಾಟನೆಗೊಂಡಿತು. ಸಯ್ಯದ್ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ಕೂರತ್ ತಂಙಳ್ ಉದ್ಘಾಟಿಸಿದರು. ನಂತರ ದುಅ ನೆರವೇರಿಸಿದರು.ಶಾಸಕ ಯು.ಟಿ ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.ಸಂಸ್ಥೆಯ ಮಾಲಕ ಬಶೀರ್ ಕಲ್ಕಟ್ಟ ಮಾತನಾಡಿ ಗ್ರಾಹಕರಿಗೆ ಅನುಕೂಲವಾಗುವ ಉದೇಶದಿಂದ ಅಸುಪಾಸಿನ ವಸತಿ ಸಮುಚಯ ಹಾಗೂ ಮನೆಗಳಿಗೆ ಉಚಿತ ಡೆಲಿವರಿ, ಮಿತದರದಲ್ಲಿ ಗುಣಮಟ್ಟದ ಸಮಾಗ್ರಿಯನ್ನು ಮರಾಟ ಮಾಡಲಾಗುವುದು ಎಂದ್ರು. ಕಾರ್ಪೋರೇಟರ್ ಅಬ್ದುಲ್ ರವೂಫ್, ಜಲಾಲುದ್ದೀನ್ ತಂಙಳ್ ಪಾತೂರು, ಅಬೂಬಕ್ಕರ್ ಸಜೀಪ, ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ ಖತೀಬ್ ಹಂಝ ಮದನಿ, ಕಲ್ಕಟ್ಟ ಇಲ್ಯಾಸ್ ಜುಮಾ ಮಸೀದಿ ಅಧ್ಯಕ್ಷ ಎ.ಎಂ ಕುಂಞ ಬಾವಾ ಹಾಜಿ ಕಲ್ಕಟ್ಟ ಉಪಸ್ಥಿತರಿದರು.