Header Ads
Header Ads
Breaking News

ಮಂಗಳೂರಿನಲ್ಲಿ ಕರ್ನಾಪೆಕ್ಸ್-2019ಕ್ಕೆ ಚಾಲನೆ

ಕರ್ನಾಪೆಕ್ಸ್-2019ರ ರಾಜ್ಯಮಟ್ಟದ ಅಂಚೆಚೀಟಿ ಪ್ರದರ್ಶನಕ್ಕೆ ಮಂಗಳೂರಿನ ಎಂ.ಜಿ. ರೋಡ್‍ನಲ್ಲಿರುವ ಡಾ. ಟಿಎಂಎ ಪೈ ಕನ್ವೆಷನ್ ಸೆಂಟರ್‍ನಲ್ಲಿ ಚಾಲನೆ ನೀಡಲಾಯಿತು. ಇಂದಿನಿಂದ ನಾಲ್ಕು ದಿನಗಳ ಕಾಲ ಅಂಚೆ ಚೀಟಿ ಪ್ರದರ್ಶನ ನಡೆಯಲಿದೆ.ಹವ್ಯಾಸಗಳ ರಾಜ ಎಂದು ಕರೆಯಲ್ಪಡುವ ಫಿಲಾಟೆಲಿ ನಿಜಕ್ಕೂ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಸ್ಟ್ಯಾಂಪ್ ಸಂಗ್ರಹವು ಇಂದು ವಿಶ್ವದ ಅತ್ಯಂತ ಜನಪ್ರಿಯ ಹವ್ಯಾಸಗಳಲ್ಲಿ ಒಂದಾಗಿದೆ. ಫಿಲಾಟೆಲಿ ಅಂಚೆ ಚೀಟಿಗಳ ಮತ್ತು ಅಂಚೆ ಇತಿಹಾಸ ಸಂಬಂಧಿತ ವಸ್ತುಗಳ ಅಧ್ಯಯನವಾಗಿದೆ. ಈ ಅಂಚೆ ಚೀಟಿಗಳ ಪ್ರದರ್ಶನ ಇಂದಿನಿಂದ ಅಕ್ಟೋಬರ್ 15ರ ವರೆಗೆ ನಡೆಯಲಿದೆ.

ಈ ಬಗ್ಗೆ ಮಾತನಾಡಿದ ಅಂಚೆ ಇಲಾಖೆಯ ಕರ್ನಾಟಕ ವಲಯದ ಮುಖ್ಯಸ್ಥ ರಾದ ಡಾ. ಚಾರ್ಲ್ಸ್ ಲೋಬೋ ಅವರು, ಮಂಗಳೂರಿನಲ್ಲಿ ರಾಜ್ಯಮಟ್ಟದ ಅಂಚೆಚೀಟಿಗಳ ಪ್ರದರ್ಶನವು ನಾಲ್ಕು ದಿನಗಳ ಕಾಲ ನಡೆಯಲಿದ್ದು, ವಿವಿಧ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಿದ್ದೇವೆ. ಮುಖ್ಯವಾಗಿ ಈ ಭಾಗದ ವಿಶೇಷ ವ್ಯಕ್ತಿಗಳ ಮತ್ತು ವಿಶೇಷ ವಸ್ತುಗಳ ಬಗ್ಗೆ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಾಗವುದು ಎಂದು ತಿಳಿಸಿದರು.

ಒಟ್ಟು ನಾಲ್ಕು ದಿನಗಳ ಕಾಲ ನಡೆಯಲಿದರು ಅಂಚೆ ಚೀಟಿ ಪ್ರದರ್ಶನ ಕಾರ್ಯಕ್ರಮದಲ್ಲಿ ಅಂಚೆ ಲಕೋಟೆಗಳ ಬಿಡುಗಡೆ, ಅಂತಿಮ ಸುತ್ತಿನ ರಸಪ್ರಶ್ನೆ ಸ್ಪರ್ಧೆ, ಕಾರ್ಯಾಗಾರುಗಳು ನಡೆಯಲಿದೆ.

Related posts

Leave a Reply

Your email address will not be published. Required fields are marked *