Header Ads
Breaking News

ಮಂಗಳೂರಿನಲ್ಲಿ ಕಾಲೇಜು ಆರಂಭ- ಕೋವಿಡ್ ಸುರಕ್ಷತೆಯೊಂದಿಗೆ ಆರಂಭಗೊಂಡ ಕಾಲೇಜು

ರಾಜ್ಯದಲ್ಲಿ ಇಂದಿನಿಂದ ಪದವಿ ಮತ್ತು ಸ್ನಾತಕೋತ್ತರ ಕಾಲೇಜು ಆರಂಭಗೊಂಡಿದ್ದು, ಸರ್ಕಾರದ ನಿಯಮದ ಪ್ರಕಾರ ಕಾಲೇಜು ಆರಂಭಗೊಂಡಿದೆ. ಮಂಗಳೂರಿನಲ್ಲೂ ಕಾಲೇಜು ಆರಂಭಗೊಂಡಿದ್ದು, ಮೊದಲ ದಿನವಾದ ಕಾರಣ ವಿದ್ಯಾರ್ಥಿಗಳ ಸಂಖ್ಯೆ ವಿರಳ ಇದೆ.

ಕೊರೋನ ಲಾಕ್ ಡೌನ್ ಬಳಿಕ ಮುಚ್ಚಿದ್ದ ಕಾಲೇಜುಗಳು ಇಂದಿನಿಂದ ತೆರೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೆಲವು ಪದವಿ ಕಾಲೇಜುಗಳಲ್ಲಿ ತರಗತಿಗಳು ಆರಂಭಗೊಂಡಿವೆ.ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ತರಗತಿ ಆರಂಭಿಸಲಾಗಿದೆ.ಕೋವಿಡ್-19ನೆಗೆಟಿವ್ ವರದಿ ಇದ್ದ ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಅದೇರೀತಿ ಕಾಲೇಜಿಗೆ ಆಗಮಿಸುವುದಕ್ಕೆ ಸಮ್ಮತಿ ಇರುವುದಾಗಿ ಪೋಷಕರಿಂದ ಒಪ್ಪಿಗೆ ಪತ್ರ ತಂದಿರುವ ವಿದ್ಯಾರ್ಥಿಗಳಿಗೆ ತರಗತಿಗೆ ಪ್ರವೇಶ ನೀಡಲಾಗಿದೆ. ತರಗತಿ ಪ್ರವೇಶಿಸುವ ಮೊದಲು ಸ್ಯಾನಿಟೈಸರ್ ಮಾಡಿ, ಕಡ್ಡಾಯ ಮಾಸ್ಕ್ ಧರಿಸಿದ ವಿದ್ಯಾರ್ಥಿಗಳು ಸುರಕ್ಷಿತ ಅಂತರದೊಂದಿಗೆ ಕುಳಿತುಕೊಂಡಿದ್ದಾರೆ. ತರಗತಿಯ ಪ್ರತಿ ಡೆಸ್ಕ್ ನಲ್ಲಿ ಓರ್ವ ವಿದ್ಯಾರ್ಥಿಯಂತೆ ಶಿಕ್ಷಕರು ತರಗತಿ ನಡೆಸುತ್ತಿದ್ದಾರೆ.

ವರದಿ: ಶರತ್ ಮಂಗಳೂರು

Related posts

Leave a Reply

Your email address will not be published. Required fields are marked *