Header Ads
Header Ads
Header Ads
Header Ads
Header Ads
Header Ads
Breaking News

ಮಂಗಳೂರಿನಾದ್ಯಂತ ಭಾರೀ ಮಳೆ : ಮನೆಯ ಮೇಲೆ ಬಿದ್ದ ಬೃಹತ್ ಗಾತ್ರದ ಮರ

ಮಂಗಳೂರಿನ ಕೆಪಿಟಿಯ ಬಾರೆಬೈಲ್ ಕೆಎಸ್‍ಆರ್‍ಟಿಸಿ ಡಿಪ್ಪೋದ ಸಮೀಪ ಗಿರಿಯಮ್ಮಕ್ಕ ಎನ್ನವುವವರ ಮನೆಯ ಮೇಲೆ ಬೃಹತ್ ಗಾತ್ರದ ಮೂರು ಬಿದ್ದು. ಸಂಪೂರ್ಣ ಮನೆ ಕುಸಿದು ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಮನೆಯಲ್ಲಿದ್ದ ಗಿರಿಯಮ್ಮಕ್ಕ ಮತ್ತು ಅವರ ಮಗಳಿಗೆ ತೀರ್ವ ಗಾಯವಾಗಿದ್ದು ಸ್ಥಳಿಯ ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೌದು ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಜೋರಾಗಿ ಸುರಿದ ಗಾಳಿ ಮಳೆಯ ಪರಿಣಾಮ ಮನೆಯ ಹತ್ತಿರವಿದ್ದ ಭಾರೀ ಗಾತ್ರದ ಮೂರು ಮರಗಳು ಮನೆಯ ಮೇಲೆ ಬಿದ್ದಿದ್ದು. ಹೊರಗೆ ಕುಳಿತ್ತಿದ್ದ ಗಿರಿಯಮ್ಮಕ್ಕ ಮತ್ತು ಅವರ ಮಗಳಿಗೆ ತೀರ್ವ ಪ್ರಮಾಣದ ಗಾಯವಾಗಿದೆ. ಘಟನೆ ನಡೆದ ತಕ್ಷಣವೇ ಸ್ಥಳಿಯರು ಸ್ಥಳಕ್ಕೆ ಬಂದು ಗಾಯಗೊಂಡ ಇಬ್ಬರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಸ್ಥಳಿಯರಾದ ಶಶಿಕಲಾ ಎಂಬುವವರು ಮಾತನಾಡಿ ಸಂಜೆ 7 ಗಂಟೆ ಸುಮಾರಿಗೆ ಇವರ ಮನೆ ಮೇಲೆ ಮರ ಬಿದ್ದಿದೆ. ಮನೆಯಲ್ಲಿದ್ದ ಇಬ್ಬರೂ ಗಾಯಗೊಂಡಿದ್ದಾರೆ. ಮೂರು ಮರ ಕೂಡ ಒಂದೇ ಮನೆಯ ಮೇಲೆ ಬಿದ್ದಿರುವುದರಿಂದ ಭಾರೀ ನಷ್ಟ ಉಂಟಾಗಿದೆ. ಭಾರಿ ಬಡತನದ ಕುಟುಂಬ ಅವರದ್ದು ಇವರ ಮನೆಗೆ ಈ ರೀತಿ ಪ್ರಕೃತಿ ವಿಕೋಪವಾಗಿರುವುದು ಬೇಸರದ ಸಂಗತಿ, ಎಂದು ತಿಳಿಸಿದರು.
ಮನೆಯಲ್ಲಿ ಮೂರು ಜನರು ವಾಸವಾಗಿದ್ದೇವೆ. ಪ್ರತಿನಿತ್ಯದಂತೆ ನಾನು ಕೆಲಸಕ್ಕೆ ಹೋಗಿದ್ದೆ. ಭಾರೀ ಗಾಳಿ ಮಳೆ ಇದ್ದುದರಿಂದ ಬರುವುದು ಸ್ವಲ್ಪ ತಡವಾಗಿತ್ತು. ಅಷ್ಟರಲ್ಲಿ ಈ ಘಟನೆ ನಡೆದು ಅಜ್ಜಿಗೆ ಮತ್ತು ಅಮ್ಮನಿಗೆ ಗಾಯವಾಗಿದೆ. ಸ್ಥಳಿಯರು ನನಗೆ ಕರೆಮಾಡಿ ಹೇಳಿದರು. ನಮಗೆ ನೆಲೆಯಿಲ್ಲದಂತಾಗಿದೆ. ನಮಗೆ ಆದಷ್ಟು ಬೇಗ ನೆಲೆ ಕಪ್ಪಿಸಿಕೊಡಬೇಕು ಎಂದು ಗಿರಿಯಮ್ಮಕರವರ ಮೊಮ್ಮಗ ಭಾಲಕೃಷ್ಣ ಕಣ್ಣೀರ ಮೂಲಕ ತನ್ನ ನೋವನ್ನು ತೋಡಿಕೊಂಡರು.
ಇದೇ ವೇಳೆ ಸ್ಥಳಿಯರಾದ ರಮೇಶ್ ಆಚಾರ್ಯರವರು ಮಾತನಾಡಿ ಇತ್ತೀಚಗೆ ಮನೆ ನಿರ್ಮಾಗೊಂಡಿರುವ ಮನೆ. ಆದರೆ ಈ ಘಟನೆಯಿಂದ ಭಾರೀ ನಷ್ಟ ಉಂಟಾಗಿದೆ. ನಮ್ಮ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಯವರಿಗೆ ಮಾಹಿತಿ ತಿಳಿಸಿದ್ದೇನೆ. ವಿಎ ಗೂ ಕೂಡ ತಿಳಿಸಿದ್ದೇನೆ. ಈ ಬಡ ಕುಟುಂಬಕ್ಕೆ ಎಲ್ಲರೂ ಜಾತಿ ಮತ ಬೇಧ ಮರೆತು ಸಹಕರಿಸಿ ಇವರಿಗೆ ನೆಲೆ ಕಲ್ಪಿಸಬೇಕು, ಇನ್ನೂ ವಿಶೇಷವೆಂದರೆ ಸಂಪೂರ್ಣ ಮನೆ ಹಾನಿಗೊಂಡಿದೆ ಆದರೆ ಅವರು ನಂಬಿಕೊಂಡು ಬಂದಿರುವ ದೈವದ ಮಣೆಮಂಚಕ್ಕೆ ಸ್ವಲ್ಪವೂ ಹಾನಿಯಾಗದೇ ಇರುವುದು ಆ ದೈವದ ಕಾರ್ಣಿಕ ಎಂದು ಹೇಳಿದರು.
ಇನ್ನೂ ಘಟನೆ ನಡೆದು ಕೇಲವೇ ಕ್ಷಣದಲ್ಲಿ ವಿಎ ವೀರಣ್ಣ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿ ಭಾರೀ ಪ್ರಮಾಣದ ಮಳೆ ಮತ್ತು ಬಿರುಗಾಳಿಯಿಂದ 7 ಗಂಟೆಯ ಸುಮಾರಿಗೆ ಮೂರು ಮರ ಒಂದೇ ಮನೆಯ ಮೇಲೆ ಬಿದ್ದಿದೆ. ಈ ಘಟನೆಯಿಂದ ಗಾಯಗೊಂಡ ಗಿರಿಯಮ್ಮ ಮತ್ತು ದೇವಮ್ಮರವರನ್ನು ಎಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾನು ಡಿಸಿ ಮತ್ತು ತಹಾಶಿಲ್ದಾರರೊಂದಿಗೆ ಮಾತನಾಡಿ ಇವರಿಗೆ ಆದಷ್ಟು ಬೇಗ ಪರಿಹಾರ ಕಲ್ಪಿಸಿಕೊಂಡುತ್ತೇನೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *