Header Ads
Header Ads
Breaking News

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಾಗೇಶ್ ಪಡು ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮ

ಇತ್ತೀಚೆಗೆ ಡೆಂಗ್ಯೂ ಮಹಾಮಾರಿಯಿಂದ ಸಾವನ್ನಪ್ಪಿದ ಖಾಸಗಿ ಟಿವಿ ವಾಹಿನಿಯ ಕ್ಯಾಮೆರಾಮೆನ್ ನಾಗೇಶ್ ಪಡು ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ನಡೆಯಿತು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ನಾಗೇಶ್ ಪಡು ಅವರ ಭಾವಚಿತ್ರಕ್ಕೆ ನಿವೃತ್ತ ಅಧಿಕಾರಿ ಪ್ರಭಾಕರ್ ಶರ್ಮಾ, ಕಿರಿಯ ಮತ್ತು ಹಿರಿಯ ಪತ್ರರ್ಕರ್ತರು ಪುಷ್ಪ ನಮನ ಸಲ್ಲಿಸಿ ಶ್ರದ್ದಾಂಜಲಿ ಅರ್ಪಿಸಿದರು.


ಈ ಸಂದರ್ಭ ಮಾತನಾಡಿದ ನಿವೃತ್ತ ಅಧಿಕಾರಿ ಪ್ರಭಾಕರ್ ಶರ್ಮಾ ಡೆಂಗ್ಯೂ ನಿಯಂತ್ರಣ ಮತ್ತು ಜಾಗೃತಿ ಬಗ್ಗೆ ರೆಡ್‌ಕ್ರಾಸ್ ವತಿಯಿಂದ ಅಭಿಯಾನ ನಡೆಸುತ್ತಿದ್ದೇವೆ ಎಂದ ಅವರು ಡೆಂಗ್ಯೂ ಹಾವಳಿಯಿಂದ ನಾಗೇಶ್ ಪಡು ಅವರನ್ನು ಕಳೆದುಕೊಂಡಿದ್ದು ಬೇಸರದ ಸಂಗತಿ ಎಂದರು.
ಆನಂತರ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಅವರು ಮಾತನಾಡಿ, ಆತ್ಮೀಯ ಮಿತ್ರರೊಬರನ್ನು ನಾವು ಇವತ್ತು ಕಳೆದುಕೊಂಡಿದ್ದೇವೆ. ನಾಗೇಶ್ ಪಡು ಅವರು ಇನ್ನು ನೆನಪು ಮಾತ್ರ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಕೋರಿದರು.
ಈ ಸಂದರ್ಭ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಮತ್ತು ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *