Header Ads
Breaking News

ಮಂಗಳೂರಿನ ಬಿಜೆಪಿ ಕಛೇರಿಯಲ್ಲಿ ಗೋಪೂಜೆ

ಮಂಗಳೂರು : ಭಾರತೀಯ ಸಂಪ್ರದಾಯದ ಪ್ರಕಾರ ದೀಪಾವಳಿ ಹಬ್ಬದ ದಿನ ಗೋಪೂಜೆಯು ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಅಂತೆಯೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಮಂಗಳೂರಿನ ಬಿಜೆಪಿ ಕಛೇರಿಯಲ್ಲಿ ಗೋಪೂಜೆಯು ನೆರವೇರಿತು.
ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋಪೂಜೆ ನೆರವೇರಿತು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಗೋಪೂಜೆ ನಡೆಯಿತು. ಬಿಜೆಪಿ ಕಛೇರಿ ಮುಂದೆ ಕರೆತಂದ ಗೋವಿಗೆ ಹೂಹಾರ ಹಾಕಿ, ಗೋವಿನ ಹಣೆಗೆ ಅರಿಶಿನ ಕುಂಕುಮ ಇಟ್ಟು ಆರತಿ ಬೆಳಗುವ ಮೂಲಕ ಶಾಸ್ತ್ರೋಕ್ತವಾಗಿ ಗೋಪೂಜೆ ನೆರವೇರಿಸಲಾಯಿತು.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸನಾತನವಾದ ಹಿಂದೂ ಸಂಸ್ಕೃತಿಯಲ್ಲಿ ವಿಶಿಷ್ಟವಾದ ಸ್ಥಾನ ಗೋಮಾತೆಗೆ ಇದೆ. ಬಿಜೆಪಿ ವತಿಯಿಂದ ವರ್ಷಂಪ್ರತಿಯಾಗಿ ಗೋಪೂಜೆ ಆಚರಿಸುತ್ತೇವೆ. ದೀಪಾವಳಿಯ ಸಂದೇಶದಂತೆ ಕತ್ತಲೆಯಿಂದ ಬೆಳಕಿನೆಡೆಗೆ ಎಂಬಂತೆ ಈ ವರ್ಷ ಕೋವಿಡ್ ಎಂಬಂತಹ ಅಂದಕಾರ ಕವಿದಿದೆ ಅವುಗಳಿಂದ ಬೆಳಕಿನೆಡೆಗೆ ಹೋಗುವಂತ ಅವಕಾಶ ಭಗವಂತ ಕಲ್ಪಿಸಲಿ ಎಂದು ಹೇಳಿದರು.
ಈ ಸಂದರ್ಭ ಕಾರ್ಯಕ್ರಮದಲ್ಲಿ ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಮೋನಪ್ಪ ಭಂಡಾರಿ ಮತ್ತಿತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

 
ವರದಿ: ಶರತ್ ಮಂಗಳೂರು

Related posts

Leave a Reply

Your email address will not be published. Required fields are marked *