Header Ads
Header Ads
Breaking News

ಮಂಗಳೂರಿನ ಶ್ರೀವಿಠೋಭ ದೇವಸ್ಥಾನದ ಆವರಣದಲ್ಲಿ ಭಜನಾ ಸಂಧ್ಯಾ- ರಾಗ ಚೈತನ್ಯ – ಭಕ್ತಿ ವಂದನಾ ಕಾರ್ಯಕ್ರಮ

ಹಿಂದುಸ್ಥಾನಿ ಸಂಗೀತ ಸ್ತರದಲ್ಲಿ ಯುವ ಪೀಳಿಗೆಯ ಕಲಾವಿದರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಮಂಗಳೂರಿನ ಶ್ರೀವಿಠೋಭ ದೇವಸ್ಥಾನದ ಆವರಣದಲ್ಲಿ ಭಜನಾ ಸಂಧ್ಯಾ- ರಾಗ ಚೈತನ್ಯ – ಭಕ್ತಿ ವಂದನಾ ಕಾರ್ಯಕ್ರಮ ನಡೆಯಿತು. ಅದ್ಭುತವಾಗಿ ಮೂಡಿಬಂದ ಕಾರ್ಯಕ್ರಮವು ಸಂಗೀತಪ್ರಿಯರ ಮನರಂಜಿಸಿತು. ಹಿಂದುಸ್ಥಾನಿ ಸಂಗೀತ ಸ್ತರದಲ್ಲಿ ಯುವ ಪೀಳಿಗೆಯ ಕಲಾವಿದರನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ವಿಭಿನ್ನ ಪ್ರಯತ್ನ ಎನ್ನುವಂತೆ ವೈಷ್ಣವ ಏಕಾದಶಿಯ ಶುಭಸಂದರ್ಭದಲ್ಲಿ ಮಂಗಳೂರಿನ ಶ್ರೀವಿಠೋಭ ದೇವಸ್ಥಾನದ ಆವರಣದಲ್ಲಿ ಭಜನಾ ಸಂಧ್ಯಾ- ರಾಗ ಚೈತನ್ಯ – ಭಕ್ತಿ ವಂದನಾ ಕಾರ್ಯಕ್ರಮ ನಡೆಯಿತು. ಪಾಂಡುರಂಗ ಶೆಣೈರವರ ಪ್ರಥಮ ಸೇವಾ ರೂಪದಲ್ಲಿ ಭಜನಾ ಸಂಧ್ಯಾ- ರಾಗ ಚೈತನ್ಯ – ಭಕ್ತಿ ವಂದನಾ ಸಂಪನ್ನಗೊಂಡಿತು. ಕಾಪು ಪಾಂಡುರಂಗ ಶೆಣೈ ಮತ್ತು ಬಳಗದ ವತಿಯಿಂದ ನಡೆದ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು. ಈ ಸಂದರ್ಭದಲ್ಲಿ ದಾಸ ಸಾಹಿತ್ಯ ಸಂಗೀತ ಕಲಾವಿದ ಪುತ್ತೂರು ಪಾಂಡುರಂಗ ನಾಯಕ್ ಅವರು ಗಾಯಕ ಪಾಂಡುರಂಗ ಶೆಣೈ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಭಜನಾ ಕಾರ್ಯಕ್ರಮದಲ್ಲಿ ಪಾಂಡುರಂಗ ನಾಯಕ್ ಅವರ ಜೊತೆಗೆ ಕಾರ್ಯಕ್ರಮದಲ್ಲಿ ಪ್ರಶಾಂತ್ ಕಾಮತ್ ಕಾಸರಗೋಡು, ಪಾಂಡುರಂಗ ಶೆಣೈ ಯವರ ಸಹೋದರ ನೀಲೇಶ್ ಶೆಣೈ ಕಾಪು ತಬಲಾ ವಾದಕರಾಗಿ ಸಹಕರಿಸಿದರು. ತಾಳದಲ್ಲಿ ಯುವ ಕಲಾವಿದ ರಮಾನಾಥ್ ಕಿಣಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಕೃಷಿಗಿಡಗಳನ್ನು ಒದಗಿಸಿದ ಅರುಣಾ ನರ್ಸರಿ, ಎಲ್ಲಾ ಸಭಿಕರಿಗೆ “ನೈಸರ್ಗಿಕ ಸತ್ವ ವುಳ್ಳ ಆರೋಗ್ಯಕರ ನೀರು ಸತ್ವಂ ಮೂಲಿಕಾ ಪಾನೀಯವನ್ನು ವಿತರಿಸಿದ ಮುರಳೀಧರ್, ಸತ್ವಂ, ಪುತ್ತೂರು ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳಲಾಯಿತು. ಕಾರ್ಯಕ್ರಮವನ್ನು ವಿಠೋಭ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿಯ ನಿವೇದಿತಾ ಜಿ. ಪ್ರಭು ನಿರೂಪಿಸಿದರು. ವಿಠೋಭ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿಯ ಆರ್ ವಿ ಶೆಣೈ ವಂದಿಸಿದರು.

Related posts

Leave a Reply