Header Ads
Header Ads
Header Ads
Breaking News

ಮಂಗಳೂರಿನ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ : ಭಕ್ತಿಗಿಂತ ಸ್ವಚ್ಛತೆಯೇ ಮೇಲೆ ಎಂಬ ಧೈಯವಾಕ್ಯದೊಂದಿಗೆ ನಡೆದ ಅಭಿಯಾನ

ಪ್ಲಾಸ್ಟಿಕ್ ಬಳಕೆಯಿಂದ ಆರೋಗ್ಯದ ಮೇಲಾಗುವ ದುಷ್ಪಾರಿಣಾಮದ ಬಗ್ಗೆ ಜನಸಾಮಾನ್ಯರಿಗೆ ಅರ್ಥವಾಗುವ ಉದ್ದೇಶದಿಂದ ಮಂಗಳೂರು ಮತ್ತು ಕಾರವಾರ ಕಡಲ ತಡಿಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ಬೃಹತ್ ಅಭಿಯಾನವನ್ನು ಆಯೋಜಿಸಲಾಗಿತ್ತು.
ಕರ್ನಾಟಕ ರಾಜ್ಯದ ಕೋಸ್ಟ್‌ಗಾರ್ಡ್ ಮತ್ತು ಎಲ್ಲಾ ಪ್ರದೇಶದ ಕೋಸ್ಟ್‌ಗಾರ್ಡನಲ್ಲೂ ಭಕ್ತಿಗಿಂತ ಸ್ವಚ್ಛತೆಯೇ ಮೇಲೂ ಎಂಬ ಧೈಯವಾಕ್ಯದೊಂದಿಗೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಬೆಂಗ್ರೆ, ಪಣಂಬೂರು, ಮೀನಕಲಿಯ, ಸುರತ್ಕಲ್, ಚಿತ್ರಾಪುರ, ಗುರುಪುರ ನದಿ ತೀರದಲ್ಲಿ ಅಭಿಯಾನವನ್ನು ಕೈಗೊಳ್ಳಲಾಯಿತು.ಈ ಅಭಿಯಾನದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಸಿಬ್ಬಂದಿಯವರು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿದ್ದರು. ಈ ಸಂದರ್ಭ ಕೋಸ್ಟ್‌ಗಾರ್ಡ್‌ನ ಕಮಾಂಡರ್ ಡಿಐಜಿ ಎಸ್‌ಎಸ್ ದಾಸಿಲಾ, ಶಾಲಾ ವಿದ್ಯಾರ್ಥಿಗಳು ಅಭಿಯಾನದಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *