Header Ads
Breaking News

ಮಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ: ಮಂಗಳೂರು ಪೊಲೀಸ್ ಕಮಿಷನರ್ ಹೇಳಿಕೆ

ಶ್ರೀಲಂಕದಲ್ಲಿ ನಡೆದ ಘಟನೆಯನ್ನು ಪರಿಗಣಿಸಿ ಮಂಗಳೂರಿನ ನಗರದ ಅತೀ ಸೂಕ್ಷ್ಮ ಪ್ರದೇಶಗಳಲ್ಲಿಯೂ ಕೂಡ ಮುಖ್ಯ ಜಂಕ್ಷನ್‍ಗಳಲ್ಲಿ ಎರಡೆಡು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವುದು ನಮ್ಮ ಮುಂದಿನ ಗುರಿ ಎಂದು ಪೊಲೀಸ್ ಕಮಿಷನರ್ ಸಂದೀಪ್ ಪಟೀಲ್ ಹೇಳಿದರು, ಇವರು ಇಂದು ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿ ಈಗಾಗಲೇ ನಗರದಲ್ಲಿ 950 ಸಿಸಿಟಿವಿ ಕ್ಯಾಮರಾಗಳು ಕಾರ್ಯನಿರ್ವಹಿಸುತ್ತಿದೆ ಮುಂದಿನದಿನಗಳಲ್ಲಿ ಇನ್ನೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ನಗರದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದೇ ನಮ್ಮ ಇಲಾಖೆಯ ಗುರಿ ಎಂದು ಹೇಳಿದರು. ಇದೇ ವೇಳೆ ನಗರದ ಜನತೆ ಫೋನ್ ಮೂಲಕ ನೀಡಿದ ಹಲವು ದೂರು ಮತ್ತು ಸಮಸ್ಯೆಗಳಿಗೆ ಶೀಘ್ರ ಕ್ರಮ ತೆಗೆದುಕೊಂಡು ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.ಈ ಸಂದರ್ಭ ಡಿಸಿಪಿ ಹನುಮಂತರಾಯ, ಲಕ್ಷ್ಮಿ ಗಣೇಶ್ ಸೇರಿದಂತೆ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *