Header Ads
Breaking News

ಮಂಗಳೂರು ಇಂಟರ್‌ನ್ಯಾಷನಲ್ ಟೂರ್‍ಸ್ ವತಿಯಿಂದ ಉಮ್ರಾ ಯಾತ್ರೆ

ಬಂಟ್ವಾಳ: ಮಂಗಳೂರು ಇಂಟರ್‌ನ್ಯಾಷನಲ್ ಟೂರ್‍ಸ್ ಇದರ ವತಿಯಿಂದ 10 ನೇ ವರ್ಷದ ಉಮ್ರಾ ಯಾತ್ರೆಯು ಇಂದು ಅಡ್ಡೂರಿನಿಂದ ಹೊರಟಿತು. ಸಂಸ್ಥೆಯ ಮಾಲಕರಾದ ಅಬೂಬಕ್ಕರ್ ಅಡ್ಡೂರ್ ಅವರ ನೇತೃತ್ವದಲ್ಲಿ ಉಮ್ರಾ ಯಾತ್ರೆಯನ್ನು ಕೈಗೊಳ್ಳಲಾಗಿದ್ದು ಸುಮಾರು 40ಮಂದಿ ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ.

ಮಂಗಳೂರಿನ ಇಂಟರ್‌ನ್ಯಾಷನಲ್ ಟೂರ್‍ಸ್ ಸಂಸ್ಥೆಯು ಯಾತ್ರಾರ್ಥಿಗಳಿಗೆ ವಿಶೇಷ ಸವಲತ್ತನ್ನು ನೀಡುತ್ತಿದ್ದು ಅನುಭವಿ ಅಮೀರ್ ಅವರನ್ನೊಳಗೊಂಡಿರುವ ಸುಮಾರು 23ವರ್ಷಗಳಿಂದ ಹಜ್ಜಾಜಿಗಳ ಹಾಗೂ ಉಮ್ರಾ ಯಾತ್ರಾರ್ಥಿಗಳ ಸೇವೆಗೈದು ಅನುಭವವಿರುವ ಮಂಗಳೂರು ಟೂರ್‍ಸ್ ಆಂಡ್ ಟ್ರಾವೆಲ್ಸ್ ಸಂಸ್ಥೆಯು ಮಕ್ಕಾ ಮದೀನ ಪರಿಸರದ ಇತರ ಎಲ್ಲಾ ಪ್ರಮುಖ ಸ್ಥಳಗಳ ವೀಕ್ಷಣೆಗೆ ವಿಶೇಷ ಒತ್ತನ್ನು ನೀಡುತ್ತಿದೆ.

ಯಾತ್ರೆಯ ಸಂದರ್ಭದಲ್ಲಿ ಮಕ್ಕಾ ಹಾಗೂ ಮದೀನ ಪರಿಸರದಲ್ಲಿ ಇತರ ಯಾವೂದೇ ಸಂಸ್ಥೆಯಿಂದ ಬಂದು ತೊಂದರೆಗೊಳಗಾದವರಿದ್ದಲ್ಲಿ ಅಂತವರಿಗೆ ಸಹಾಯ ಸಹಕಾರ ನೀಡಿ ತಕ್ಷಣದಲ್ಲಿ ಅವರ ಸಂಕಷ್ಟಕ್ಕೆ ಸ್ಪಂದಿಸುತ್ತಿರುವ ಒಂದು ಸಂಸ್ಥೆಯಾಗಿ ಮಂಗಳೂರು ಟೂರ್‍ಸ್ ಆಂಡ್ ಟ್ರಾವೆಲ್ಸ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.ಈ ಸಂದರ್ಭ ಸಂಸ್ಥೆಯ ಮಾಲಕ ಎನ್. ಅಬೂಬಕ್ಕರ್, ಸಾಮಾಜಿಕ ಕಾರ್ಯಕರ್ತ ಅಶ್ರಫ್ ಎ.ಜಿ., ಜಿಲ್ಲಾ ಪಂಚಾಯಿತಿ ಸದಸ್ಯ ಯು.ಪಿ. ಇಬ್ರಾಹಿಂ, ಪತ್ರಕರ್ತ ಎಂ.ಅಶ್ರಫ್ ಕಮ್ಮಾಜೆ, ಎನ್.ಇಸ್ಮಾಯಿಲ್ ಅಡ್ಡೂರು, ಸಾಧಿಕ್ ಅಡ್ಡೂರು, ಫಾರೂಕ್ ಅಡ್ಡೂರು, ಎನ್.ಇ. ಮೊಹಮ್ಮದ್, ಟಿ. ಸೈಯ್ಯದ್ ತೋಕೂರು ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *