Header Ads
Breaking News

ಮಂಗಳೂರು ಪಾಲಿಕೆ ಕುಂಜತ್ತಬೈಲ್ ದಕ್ಷಿಣ 15ನೇ ವಾರ್ಡ್ ಸದಸ್ಯೆಗೆ ಕೊರೊನಾ ಪಾಸಿಟಿವ್

 ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ದಿನೇದಿನೇ ಹೆಚ್ಚಾಗುತ್ತಿದ್ದು ಇಂದು ಕಾರ್ಪೋರೇಟರ್ ಓರ್ವರಿಗೂ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಕುಂಜತ್ತಬೈಲ್ ದಕ್ಷಿಣ 15ನೇ ವಾರ್ಡ್‌ನ ಸದಸ್ಯೆಗೆ ಪಾಸಿಟಿವ್ ಪತ್ತೆಯಾಗಿದೆ. ಈ ಬಗ್ಗೆ ಸ್ವತಃ ಸುಂಮಗಲಾ ರಾವ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಾಕಿದ್ದು, ತನ್ನ ಗಂಡನಿಗೂ ಪಾಸಿಟಿವ್ ಆಗಿದ್ದು ಗುಣಮುಖರಾಗುತ್ತಿದ್ದೇವೆ ಎಂದಿದ್ದಾರೆ. ಕಳೆದ ಕೆಲ ದಿನದ ಹಿಂದೆ ಕುಂಜತ್ತಬೈಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭೆಯಲ್ಲಿ ಕಾರ್ಪೋರೇಟರ್ ಭಾಗಿಯಾಗಿದ್ದು,ಇದೇ ಸಭೆಗೆ ಬಂದಿದ್ದ ವ್ಯಕ್ತಿಯೋರ್ವನಿಗೆ ಪಾಸಿಟಿವ್ ಆಗಿದ್ದು, ಈ ಹಿನ್ನಲೆಯಲ್ಲಿ ಕಳೆದ ಏಳು ದಿನದೊಂದ ಕಾರ್ಪೋರೇಟರ್ ಸೆಲ್ಫ್ ಕ್ವಾರಂಟೈನ್ ಆಗಿದ್ದರು. ಇದೀಗ ಬಂದ ವರದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

Related posts

Leave a Reply

Your email address will not be published. Required fields are marked *