Header Ads
Header Ads
Header Ads
Breaking News

ಮಂಗಳೂರು ಪಿಸಿಯೋಕಾನ್-2018  ವಿಕಾಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರ ಸೌತ್ ಕೆನರಾ ಪಿಸಿಯೋಥೆರಫಿ ಟೀಚರ್‍ಸ್ ಅಸೋಸಿಯೇಶನ್ ಸಹಯೋಗ

ಸೌತ್ ಕೆನರಾ ಪಿಸಿಯೋಥೆರಫಿ ಟೀಚರ್‍ಸ್ ಅಸೋಸಿಯೇಶನ್ ಮತ್ತು ವಿಕಾಸ್ ಕಾಲೇಜ್ ಆಫ್ ಪಿಸಿಯೋಥೆರಫಿ ವತಿಯಿಂದ ಮಂಗಳೂರು ಪಿಸಿಯೋಕಾನ್- 2018 ರಕ್ತದಾನ ಶಿಬಿರ ನಗರದ ಮೇರಿಹಿಲ್‌ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ಶನಿವಾರ ನಡೆಯಿತು.

ಮಂಗಳೂರಿನ ಮೇರಿಹಿಲ್‌ನಲ್ಲಿರುವ ವಿಕಾಸ್ ಕಾಲೇಜಿನಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದ ವಿಕಾಸ್ ಎಜ್ಯುಕೇಶನ್ ಟ್ರಸ್ಟ್‌ನ ಚೇರ್‌ಮೆನ್ ಕೃಷ್ಣ ಜೆ. ಪಾಲೇಮಾರ್ ಮಾತನಾಡಿ, ವಿಕಾಸ್ ಕಾಲೇಜಿನಲ್ಲಿ ವಿನೂತನವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದ್ದೇವೆ. ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಪಿಸಿಯೋಕಾನ್-2018 ರ ಚೇರ್‌ಮೇನ್ ಡಾ. ಯು.ಟಿ. ಇಫ್ತಿಕಾರ್ ಆಲಿ ಮಾತನಾಡಿ, ವಿಕಾಸ್ ಕಾಲೇಜಿನಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಪ್ರತಿಯೊಬ್ಬರು ರಕ್ತದಾನ ಶಿಬಿರದಲ್ಲಿ ಪಾಲ್ಗೊಳ್ಳಿ ಎಂದರು ಇದೇ ವೇಳೆ ಹಲವಾರು ಮಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡರು.

ಈ ಸಂದರ್ಭ ಮೆನ್ಯುವಲ್ ತೆರಫಿ ಫೌಂಡೇಶನ್ ಆಫ್ ಇಂಡಿಯಾದ ಅಧ್ಯಕ್ಷರಾದ ಡಾ. ಉಮಾಶಂಕರ್ ಮೊಹಂತಿ, ರಕ್ತದಾನ ಶಿಬಿರದ ಸಂಯೋಜಕ ಡಾ. ರಮೇಶ್, ಕಾ ಆರ್ಡಿನೇಟರ್ ಪಾರ್ಥಸಾರಥಿ ಪಾಲೇಮಾರ್ ಮತ್ತಿತರರು ಉಪಸ್ಥಿತರಿದ್ದರು.

ವರದಿ: ನಾಗರಾಜ್ ಮಂಗಳೂರು

Related posts

Leave a Reply