
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತುಳು ಭಾಷೆಯಲ್ಲಿ ಮಂಗಳೂರಿನ ಜನತೆಗೆ ಗಣರಾಜ್ಯೋತ್ಸವ ಕುರಿತು ಶುಭ ಕೋರಿ ವಿಡಿಯೋ ಮೂಲಕ ಟ್ವೀಟ್ ಮಾಡಿದ್ದಾರೆ.ಪ್ರತಿವರ್ಷ ಜ.26ರಂದು ವಿಶ್ವದೆಲ್ಲೆಡೆ ದೇಶದ ಗಣರಾಜ್ಯೋತ್ಸವವನ್ನು ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಗರದ ಸಮಸ್ತ ನಾಗರಿಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ವಿಡಿಯೋ ಹಾಕೋ ಮೂಲಕ ಟ್ವೀಟ್ ಮಾಡಿದ್ದಾರೆ. ಟ್ವೀಟ್ ತುಳು ಭಾಷೆಯಲ್ಲಿದ್ದು, ಕರಾವಳಿಯ ಜನತೆ ಸಂತಸ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ. ಜೊತೆಗೆ ಈ ಟ್ವೀಟ್ ಹಲವು ಬಾರಿ ರೀಟ್ವೀಟ್ ಆಗಿದೆ.