
ಮಂಗಳೂರು ಮಹಾನಗರಪಾಲಿಕೆಯ ಸಾಮಾನ್ಯ ಸಭೆಯು ಮೇಯರ್ ದೀವಾಕರ್ ಪಾಂಡೇಶ್ವರ್ರವರ ಅಧ್ಯಕ್ಷತೆಯಲ್ಲಿ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ನಡೆಯಿತು. ಆರಂಭದಲ್ಲಿ ಮೇಯರ್ರವರು ಪಾಲಿಕೆ ಸದಸ್ಯರಿಗೆ ಕರ್ನಾಟಕ ಪೌರ ನಿಗಮಗಳ ಕೈಪಿಡಿಯನ್ನು ಹಸ್ತಾಂತರಿಸಿದರು. ಬಳಿಕ ಸಭೆಯಲ್ಲಿ ನಗರದ ಅಭಿವೃದ್ಧಿ ವಿಚಾರದ ಕುರಿತು. ಆರೋಪ ಪ್ರತ್ಯಾರೋಪಗಳು ನಡೆಯಿತು.ಇನ್ನೂ ಪ್ರಮುಖ ವಿಚಾರಗಳಾದ ಕುಡಿಯುವ ನೀರು, ಟೋಯಿಂಗ್ನ ಕುರಿತು ಚರ್ಚಿಸಲಾಯಿತು. ಮತ್ತು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ಗೆ ನಾರಾಯಣಗುರು ರವರ ಹೆಸರಿಡಬೇಕೆಂದು ವಿಪಕ್ಷ ನಾಯಕರಾದ ಮಹಮ್ಮದ್ ರವೂಫ್ ಒತ್ತಾಯಿಸಿದ್ದರು. ಒಟ್ಟಿನಲ್ಲಿ ನಗರದಲ್ಲಿ ಆಗಬೇಕಿರುವ ಅನೇಕ ಅಭಿವೃದ್ಧಿ ವಿಚಾರದ ಕುರಿತು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ ಸಮರ ನಡೆಯಿತು.