Header Ads
Breaking News

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆ : ನೂತನ ಮೇಯರ್ ಆಗಿ ಬಿಜೆಪಿಯ ದಿವಾಕರ್ ಆಯ್ಕೆ

ಮಂಗಳೂರು ಮಹಾನಗರ ಪಾಲಿಕೆಯ 21ನೇ ಅವಧಿಗೆ ಮೇಯರ್-ಉಪಮೇಯರ್ ಚುನಾವಣೆ ನಡೆದಿದ್ದು, ಕಂಟೋನ್ಮೆಂಟ್ ವಾರ್ಡ್‍ನ ದಿವಾಕರ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಇನ್ನು ಉಪಮೇಯರ್ ಆಗಿ ಕುಳಾಯಿ ವಾರ್ಡ್ ಸದಸ್ಯೆ ವೇದಾವತಿ ಆಯ್ಕೆಯಾದರು.. 60 ವಾರ್ಡ್ ಗಳಲ್ಲಿ 44 ಸಂಖ್ಯಾಬಲ ಹೊಂದಿದ್ದ ಬಿಜೆಪಿಗೆ ಕಾಂಗ್ರೆಸ್ ಎಲ್ಲೂ ಸವಾಲಾಗಲಿಲ್ಲ. ಹಿಂದುಳಿದ ವರ್ಗ ಎ ಮೀಸಲಾತಿ ಹೊಂದಿದ್ದ ಮೇಯರ್ ಸ್ಥಾನಕ್ಕೆ ಮೂರು ಬಾರಿ ಕಾರ್ಪೊ ರೇಟರ್ ಆಗಿ ಆಯ್ಕೆಯಾದ ದಿವಾಕರ್ ಪಾಂಡೇಶ್ವರ್ ಆಯ್ಕೆಯಾದ್ರೆ, ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಮೇಯರ್ ಸ್ಥಾನಕ್ಕೆ ವೇದಾವತಿ ಆಯ್ಕೆಯಾದರು. ಇನ್ನು ಬಿಜೆಪಿಗೆ ಶಾಸಕದ್ವಯರಾದ ವೇದವ್ಯಾಸ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಹಾಜರಿದ್ದು ಬಲ ತುಂಬಿದ್ರು.. ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಉಪಸ್ಥಿತರಿದ್ದರು. 14 ಸದಸ್ಯ ಬಲ ಹೊಂದಿರೋ ಕಾಂಗ್ರೆಸ್ ನಿಂದ ಕೇಶವ ಮರೋಳಿ ಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಇನ್ನು ಎರಡು ಸದಸ್ಯ ಬಲ ಹೊಂದಿರೋ ಎಸ್ಡಿಪಿಐ ಅಭ್ಯರ್ಥಿಗಳು ತಟಸ್ಥರಾದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ವಿ. ಯಶವಂತ್ ಚುನಾವಣೆ ಪ್ರಕ್ರಿಯೆಯನ್ನ ನಡೆಸಿದ್ರು. ಕೈ ಎತ್ತುವ ಮೂಲಕ ಸದಸ್ಯರು ತಮ್ಮ ಅಭ್ಯರ್ಥಿಗಳ ಪರ ಮತಚಲಾಯಿಸಿದ್ರು. ಮೇಯರ್-ಉಪಮೇಯರ್ ಚುನಾವಣೆ ಹಿನ್ನೆಲೆ ಪಾಲಿಕೆ ಕಚೇರಿಗೆ ಮಧ್ಯಾಹ್ನದವರೆಗೂ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿತ್ತು.

್ಮ

Related posts

Leave a Reply

Your email address will not be published. Required fields are marked *