Header Ads
Header Ads
Breaking News

ಮಂಗಳೂರಿನ ಮಾರುಕಟ್ಟೆಗೆ ಬಿಡುಗಡೆಗೊಂಡಿದೆ ಟಿವಿಎಸ್ ಕಿಂಗ್ ಡ್ಯೂರಾಮೆಕ್ಸ್ 225 ಎಲ್‌ಸಿ ಆಟೋರಿಕ್ಷಾ

ಮಂಗಳೂರಿನ ಕಂಕನಾಡಿಯ ಟಿವಿಎಸ್ ದ್ವಿಚಕ್ರ ವಾಹನಗಳ ಅಧಿಕೃತ ಡೀಲರ್ ಮತ್ತು ಸರ್ವೀಸ್ ಸೆಂಟರ್‌ನ ಕಾಂಚನ ಮೋಟಾರ್‍ಸ್‌ನಲ್ಲಿ ನೂತನ ಟಿವಿಎಸ್ ಕಿಂಗ್ ಡ್ಯೂರಾಮೆಕ್ಸ್ 225 ಎಲ್‌ಸಿ ಅಟೋರಿಕ್ಷಾ ಮಂಗಳೂರಿನ ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಮಂಗಳೂರಿನಲ್ಲಿ ಕಾರ್ಯಚರಿಸುತ್ತಿರುವ ಟಿವಿಎಸ್‌ನ ಅಧಿಕೃತ ಡೀಲರ್ ಕಾಂಚನ ಮೋಟಾರ್‍ಸ್‌ನಲ್ಲಿ ಈಗಾಗಲೇ ಹೊಸ ತಂತ್ರಜ್ಞಾನ ಹೊಂದಿರುವ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿ ಜನಪ್ರಿಯಗೊಂಡಿದೆ. ಇದೀಗ ಟಿವಿಎಸ್‌ನ ಹೊಸ ಮಾದರಿಯ ಕಿಂಗ್ ಡ್ಯೂರಾಮೆಕ್ಸ್ 225 ಎಲ್‌ಸಿ ತ್ರಿಚಕ್ರ ವಾಹನ ಮಾರುಕಟ್ಟೆಗೆ ಬಿಡುಗೊಂಡಿದೆ.

ನೂತನ ವಾಹನ ಅಟೋರಿಕ್ಷಾದ ಬಿಡುಗಡೆ ಸಮಾರಂಭವು ಮಂಗಳೂರಿನ ಲೇಡಿಹಿಲ್ ಚರ್ಚ್ ಹಾಲ್‌ನಲ್ಲಿ ನಡೆಯಿತು. ವಿಧಾನ ಪರಿಷತ್‌ನ ಸದಸ್ಯರಾದ ಐವನ್ ಡಿಸೋಜಾ ಅವರು ಟಿವಿಎಸ್‌ನ ಹೊಸ ಕಿಂಗ್ ಡ್ಯೂರಾಮೆಕ್ಸ್ 225 ಎಲ್‌ಸಿ ಮಂಗಳೂರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಇವತ್ತಿನ ದಿನದಲ್ಲಿ ರಿಕ್ಷಾ ಸುರಕ್ಷಿತವಾದಂತಹ ವಾಹನ. ಅಂತಹ ವಾಹವನವನ್ನು ಪ್ರಸಾದ್ ರಾಜ್ ಕಾಂಚನ್ ಅವರು ಮಂಗಳೂರಿನ ಜನತೆಗೆ ಪರಿಚಯಿಸುತ್ತಿದ್ದಾರೆ ಎಂದ ಅವರು ಕಾಂಚನ ಮೋಟಾರ್‍ಸ್‌ನವರ  ಆನಂತರ ಕಾಂಚನ ಮೋಟಾರ್‍ಸ್‌ನ ಎಮ್.ಡಿ ಪ್ರಸಾದ್ ರಆಜ್ ಕಾಂಚನ್ ಅವರು ಮಾತನಾಡಿ, ಟಿವಿಎಸ್‌ನಿಂದಲೇ ನನ್ನ ಸಂಸ್ಥೆ ಬೆಳೆಯಲು ಕಾರಣವಾಗಿದೆ. ಕರ್ನಾಟಕದಲ್ಲಿ ಆರು ಜಿಲ್ಲೆಯಲ್ಲಿ ಡೀಲರ್‌ಶಿಪ್ ಮುಖಾಂತರ ಕಾರ್ಯಚರಿಸುತ್ತಿದ್ದೇವೆ. ಇದೀಗ ನೂತನವಾಗಿ ಅಟೋರಿಕ್ಷಾವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಮಂಗಳೂರಿನ ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಟೆಕ್ನೋಲಜಿಯೊಂದಿಗೆ ಅಟೋರಿಕ್ಷಾ ತಯಾರಾಗಿದೆ ಎಂದು ಹೇಳಿದರು. ಇದೇ ವೇಳೆ ಟಿವಿಎಸ್ ಮೋಟಾರ್‍ಸ್‌ನ ಸೀನಿಯರ್ ಮ್ಯಾನೇಜರ್ ಪ್ರಕಾಶ್ ಕಾರ್ತಿಕೇಯನ್ ಅವರು ನೂತನವಾಗಿ ಬಿಡುಗಡೆಗೊಂಡ ಅಟೋರಿಕ್ಷಾದ ವೈಶಿಷ್ಟ್ಯತೆಯ ಬಗ್ಗೆ ವಿವರಿಸಿದರು. 

Related posts

Leave a Reply

Your email address will not be published. Required fields are marked *