Header Ads
Breaking News

ಮಂಗಳೂರು ವಿವಿ ಅಂತರ್‍ಕಾಲೇಜು ಮಟ್ಟದ ಫುಟ್‍ಬಾಲ್ ಪಂದ್ಯಾಟ : ಮೂಡುಬಿದಿರೆಯ ಆಳ್ವಾಸ್ ತಂಡ ದ್ವಿತೀಯ ಸ್ಥಾನ

ಮೂಡುಬಿದಿರೆಯ ಶ್ರೀ ಮಹಾವೀರ ಕಾಲೇಜು ಮತ್ತು ಸಮಾಜ ಮಂದಿರ ಸಭಾದ ಸಂಯುಕ್ತ ಆಶ್ರಯದಲ್ಲಿ ಜಿ.ವಿ.ಪೈ ಸ್ಟೇಡಿಯಂನಲ್ಲಿ 2 ದಿನ ನಡೆದ ಮಂಗಳೂರು ವಿವಿ ಅಂತರ್‍ಕಾಲೇಜು ಉಡುಪಿ ವಲಯ ಮಟ್ಟದ ಫುಟ್‍ಬಾಲ್ ಪಂದ್ಯಾಟದಲ್ಲಿ ಬ್ರಹ್ಮಾವರದ ಕ್ರಾಸ್ ಲ್ಯಾಂಡ್ ಕಾಲೇಜಿನ ತಂಡವು ಪ್ರಥಮ ಮತ್ತು ಮೂಡುಬಿದಿರೆಯ ಆಳ್ವಾಸ್ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು ತೃತೀಯ ಮತ್ತು ಐಕಳ ಪೊಂಪೈ ಕಾಲೇಜಿನ ತಂಡವು ಚತುರ್ಥ ಸ್ಥಾನವನ್ನು ಗಳಿಸಿಕೊಂಡಿದೆ. ಆಟದಲ್ಲಿ ಕ್ರಾಸ್ ಲ್ಯಾಂಡ್ ತಂಡದ ವಿಕ್ಕಿ ಉತ್ತಮ ಹಿಡಿತಗಾರ ಮತ್ತು ಗ್ಲ್ಯಾಡ್ಸನ್ ಉತ್ತಮ ಗೋಲ್‍ಕೀಪರ್‍ಗಳಾಗಿ ಹೊರಹೊಮ್ಮಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಶ್ರೀ ಮಹಾವೀರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಬಹುಮಾನಗಳನ್ನು ವಿತರಿಸಿ ಮಾತನಾಡಿ ಫುಟ್ ಬಾಲ್ ಸಾಮಥ್ರ್ಯವನ್ನು ವ್ಯಕ್ತಪಡಿಸುವ ಆಟ. ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಚೌಟರ ಅರಮನೆಯ ಕುಲದೀಪ ಎಂ, ಸಂಪತ್ ಸಾಮ್ರಾಜ್ಯಪುರಸಭಾ ಸದಸ್ಯರಾದ ಸುರೇಶ್ ಪ್ರಭು, ಉದ್ಯಮಿ ಮಹೇಂದ್ರವರ್ಮ ಜೈನ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ನೇಮಿರಾಜ್ ಹೆಗ್ಡೆ, ಉದ್ಯಮಿ ಅಬುಲ್ ಅಲಾ ಪುತ್ತಿಗೆ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *