Header Ads
Breaking News

ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್‌ ನಾಮಕರಣಕ್ಕೆ ಆಗ್ರಹ :ಕಾಂಗ್ರೆಸ್ ನಾಯಕರಿಂದ ಮೇಯರ್‌ಗೆ ಮನವಿ

ಮಂಗಳೂರು  : ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್‌ಗೆ ಶ್ರೀ ನಾರಾಯಣ ಗುರು ದೇವ ರೈಲ್ವೆ ಸ್ಟೇಷನ್ ನಾಮಕರಣ ಮಾಡುವಂತೆ ಮಂಗಳೂರು ಪಾಲಿಕೆಯ ವಿಪಕ್ಷ ನಾಯಕರು ಮೇಯರ್ ದಿವಾಕರ್ ಪಾಂಡೇಶ್ವರ್ ಅವರಿಗೆ ಮನವಿಯಲ್ಲಿ ಸಲ್ಲಿಸಿದರು.

ಈ ಬಗ್ಗೆ ಮಾತನಾಡಿದ ಪಾಲಿಕೆಯ ಸದಸ್ಯರಾದ ಶಶಿಧರ್ ಹೆಗ್ಡೆ ಅವರು ಮಾತನಾಡಿ, ಮುಂದಿನ ಪರಿಷತ್ ಸಭೆಯಲ್ಲಿ ಸಾಮಾನ್ಯ ಸಭೆಗೆ ಗೊತ್ತುವಳಿ ಮಂಡನೆ ಬಗ್ಗೆ ಪ್ರತಿಪಕ್ಷದ ನಾಯಕರ ನೇತೃತ್ವದಲ್ಲಿ ಮನವಿಯನ್ನು ನೀಡಲಾಗಿದೆ. ಶ್ರೀ ನಾರಾಯಣ ಗುರು ದೇವರು ದಾರ್ಶನಿಕರಾಗಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾಜಿಕ ಬದಲಾವಣೆಯನ್ನು ಮಾಡಿ, ಶಿಕ್ಷಣಕ್ಕೆ ಮತ್ತು ಧಾರ್ಮಿಕತೆಗೆ ಹೆಚ್ಚು ಒತ್ತನ್ನು ನೀಡಿದ್ದಾರೆ. ಅದಕ್ಕೆ ಪೂರಕವಾಗಿ ನಾರಾಯಣ ಗುರುದೇವರ ಹೆಸರನ್ನು ಮಂಗಳೂರಿನ ರೈಲ್ವೇ ನಿಲ್ದಾಣಕ್ಕೆ ಶಾಶ್ವತವಾಗಿ ಇಡಬೇಕು. ಈ ಬಗ್ಗೆ ಮುಂದಿನ ಪರಿಷತ್ ಸಭೆಯಲ್ಲಿ ಚರ್ಚೆ ಮಾಡಬೇಕಾಗಿದೆ ಎಂದು ಹೇಳಿದರು.
ಆನಂತರ ಪಾಲಿಕೆಯ ಪ್ರತಿಪಕ್ಷದ ನಾಯಕ ಅಬ್ದುಲ್ ರವೂಫ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಅಪಾರ ಗೌರವ ಇರುವ ಕಾರಣ ಅವರ ಹೆಸರನ್ನು ಮಂಗಳೂರಿನ ಸೆಂಟ್ರಲ್ ರೈಲ್ವೆ ಸ್ಟೇಷನ್‌ಗೆ ಇಡಬೇಕೆಂದು ನಮ್ಮ ಆಗ್ರಹ ಎಂದು ಹೇಳಿದರು.
ಈ ಬಗ್ಗೆ ಮನವಿ ಸ್ವೀಕರಿಸಿದ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ಅವರು ಈಗಾಗಲೇ ಪ್ರತಿಪಕ್ಷದ ಎಲ್ಲಾ ಸದಸ್ಯರು ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್‌ಗೆ ಶ್ರೀ ನಾರಾಯಣ ಗುರು ದೇವ ರೈಲ್ವೇ ಸ್ಟೇಷನ್ ಎಂದು ನಾಮಕರಣ ಮಾಡುವಂತೆ ಮನವಿಯನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭ ಕಾಂಗ್ರೆಸ್ ನಾಯಕರ ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

Related posts

Leave a Reply

Your email address will not be published. Required fields are marked *