Header Ads
Header Ads
Header Ads
Breaking News

ಕೆಎಂಸಿ ಆಸ್ಪತ್ರೆಯಲ್ಲಿ ವಿಶ್ವ ಮಧುಮೇಹ ದಿನಾಚರಣೆ : ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ ನಡೆದ ಮಾಹಿತಿ ಕಾರ್ಯಾಗಾರ

ಮಂಗಳೂರಿನ ಅತ್ತಾವರ ಕೆಎಂಸಿಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಮಧುಮೇಹದ ಬಗ್ಗೆ ಸಾರ್ವಜನಿಕ ಜಾಗೃತಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳು ಮಧುಮೇಹದಿಂದ ಆರೋಗ್ಯ ಮಾರ್ಗೋಪಾಯಗಳು ಎಂಬ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರಿನ ಅತ್ತಾವರದಲ್ಲಿರು ಕೆಎಂಸಿ ಆಸ್ಪತ್ರೆಯು ಆರೋಗ್ಯದ ವಿಚಾರದಲ್ಲಿ ಸಾರ್ವಜನಿಕರಿಗೆ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಇದೀಗ ವಿಶ್ವ ಮಧುಮೇಹ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಜಾಗೃತಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕೆಎಂಸಿ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕರು ಮತ್ತು ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ದೀಪಕ್ ಮಡಿ ಅವರು ಮಾತನಾಡಿ, ಡಯಾಬಿಟೀಸ್‌ನ್ನು ಆರೋಗ್ಯಕರ ಜೀವನ ಶೈಲಿಯ ಮೂಲಕ ತಡೆಗಟ್ಟಬಹುದು. ಆಹಾರ ಅಭ್ಯಾಸದಿಂದ ಡಯಾಬಿಟೀಸನ್ನು ಕಡಿಮೆ ಮಾಡಬಹುದು ಎಂದು ಹೇಳಿದರು.
ಕೆಎಂಸಿ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಅಸೋಸಿಯೇಟ್ ಪ್ರೋಪೆಸರ್ ಡಾ. ಅರುಣ್ ಎಸ್ ಅವರು, ನಮ್ಮ ಜೀವನ ಶೈಲಿಯಿಂದ ಕೆಲವು ಕಾಯಿಲೆಗಳು ಹೆಚ್ಚಳವಾಗಲು ಕಾರಣ. ಡಬ್ಲ್ಯು ಹೆಚ್ ಓ ಪ್ರಕಾರ 2019 ರ ಥೀಮ್ ಡಯಾಬಿಟೀಸ್ ಆಂಡ್ ಫ್ಯಾಮಿಲಿ, ಫ್ಯಾಮಿಲಿ ಸಪೋರ್ಟ್ ಇದ್ದಾಗ ಮಧುಮೇಹವನ್ನು ಯಥಾಸ್ಥಿತಿಯಲ್ಲಿಡಲು ಸಾಧ್ಯ ಎಂದು ಮಾಹಿತಿ ನೀಡಿದರು.
ಕೆಎಂಸಿ ಆಸ್ಪತ್ರೆಯ ಅಸಿಸ್ಟೆಂಟ್ ಪ್ರೊಪೇಸರ್ ಮತ್ತು ಕಣ್ಣಿನ ತಜ್ಞರಾದ ಡಾ. ಗ್ಲಾಡೀಸ್ ಅವರು ಮಾತನಾಡಿ, ಮಧುಮೇಹದಿಂದ ಹೇಗೆ ಕಣ್ಣಿನ ಸಮಸ್ಯೆ ಉಂಟಾಗುತ್ತದೆ ಎಂಬುವುದರ ಬಗ್ಗೆ ಮಾಹಿತಿ ನೀಡಿದರು.
ಕೆಎಂಸಿ ಆಸ್ಪತ್ರೆಯ ಡಯಟೀಶಿಯನ್ ಸುಶ್ಮಾ ಅವರು ಮಧುಮೇಹ ಕಾಯಿಲೆ ಯಾವ ಆಹಾರದಿಂದ ಬರುತ್ತದೆ ಹಾಗೂ ಯೋಗಾಭ್ಯಾಸದಿಂದ ಮತ್ತು ಆಹಾರದಲ್ಲಿನ ನಿಯಂತ್ರಣದಿಂದ ಮಧುಮೇಹವನ್ನು ಕಡಿಮೆ ಮಾಡಬಹುದು ಎಂಬ ಬಗ್ಗೆ ಸಾರ್ವಜನಿಕರಿಗೆ ತಿಳಿ ಹೇಳಿದರು.
ಇದೇ ವೇಳೆ ಕೆಎಂಸಿ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥರಾದ ರಾಕೇಶ್ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭ ಕೆಎಂಸಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತಿರದ್ದರು.

Related posts

Leave a Reply

Your email address will not be published. Required fields are marked *