
ಸುಬ್ರಹ್ಮಣ್ಯ : ನೀನು ಮುಂದೆ ಹೋಗು ಎಂದು ತಿಳಿಸಲು ಗುರು ಬೇಕು, ಇಂದು ಕಡಬ ಪ್ರಖಂಡ ಗುರುವಿನ ಸ್ಥಾನದಲ್ಲಿ ಇದ್ದುಕೊಂಡು ಧರ್ಮ ಜಾಗೃತಿ ಕೆಲಸ ಮಾಡಿದೆ. ಪಾದಯಾತ್ರೆ ಮೂಲಕ ಧರ್ಮ ಜಾಗೃತಿ ಕಾರ್ಯ ಶ್ಲಾಘನೀಯ ಎಂದು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಸೂರ್ಯನಾರಾಯಣ ಭಟ್ ಕಶೆಕೋಡಿ ಹೇಳಿದರು.
ಅವರು ಸುಬ್ರಹ್ಮಣ್ಯ ಜಾತ್ರೋತ್ಸವ ಸಂದರ್ಭ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಕಡಬ ಪ್ರಖಂಡ ತಾಲೂಕು ವತಿಯಿಂದ ಹಮ್ಮಿಕೊಂಡ “ನಮ್ಮ ನಡೆ ಕುಕ್ಕೆ ಶ್ರೀ ಸುಬ್ರಹ್ಮಣ್ಯನೆಡೆಗೆ” ಧರ್ಮ ಜಾಗೃತಿಗಾಗಿ ಎಂಬ ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ,
ದೇವರ ದರುಶನಕ್ಕೆ ತೆರಳುವ ಸಂದರ್ಭದಲ್ಲಿ ದೇಹವನ್ನು ದೈಹಿಕವಾಗಿ ದಂಡಿಸಿಕೊAಡು ತೆರಳಿ ದೇವರ ದರುಶನ ಪಡೆದಾಗ ಸಾರ್ಥಕತೆ ಮನೋಭಾವ ಮೂಡುತ್ತದೆ.
ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಬಳಿ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯ ಎ.ಬಿ.ಮನೋಹರ ರೈ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಅಲ್ಲಿಂದ ಪಾದಯಾತ್ರೆಯ ಮೂಲಕ ಭಜನಾ ಕರ್ಯಕ್ರಮದ ಮೂಲಕ ಸುಬ್ರಹ್ಮಣ್ಯಕ್ಕೆ ಬಂದ ಯಾತ್ರಾರ್ಥಿಗಳು ಶ್ರೀ ದೇವರ ದರುಶನ ಪಡೆದರು. ಉದ್ಯಮಿ ಅನುಗ್ರಹ ಕನ್ಸ್ಟçಕ್ಷನ್ನ ರವಿ ಕಕ್ಕೆಪದವು, ಕಡಬ ಪ್ರಖಂಡ ವಿ.ಹಿ.ಪ.ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಬಜರಂಗದಳ ಸಂಯೋಜಕ ಮೂಲಚಂದ್ರ ಕಾಂಚನ, ಮಾತೃಶಕ್ತಿ ಪ್ರಮುಖ್ ಗೀತಾ ಅಮೈ ಕೇವಳ ಸೇರಿದಂತೆ ಕಡಬ ಪ್ರಖಂಡ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಸಮಿತಿ ಪದಾಧಿಕಾರಿ, ಸದಸ್ಯರು ಪಾಲ್ಗೊಂಡಿದ್ದರು. ಉಮೇಶ್ ಶೆಟ್ಟಿ ಸಾಯಿರಾಮ್ ಕಾರ್ಯಕ್ರಮ ನಿರ್ವಹಿಸಿದರು.
ಸುಬ್ರಹ್ಮಣ್ಯ; ಪಾದಯಾತ್ರೆಯ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲಾಯಿತು.