Header Ads
Breaking News

ಮಂಜನಾಡಿಯ ದರ್ಗಾ ಮತ್ತು ಜುಮ್ಮಾ ಮಸೀದಿ ಸಮೀಪ ತಡೆಗೋಡೆ : ಶಾಸಕ ಯು.ಟಿ. ಖಾದರ್ ರಿಂದ ಶಿಲಾನ್ಯಾಸ

ಬುಸ್ತಾನುಲ್ ಉಲೂಂ ದರ್ಸ್ ಮತ್ತು ಮಂಜನಾಡಿ ಇಸ್ಮಾಯಿಲ್ ವಲಿಯುಲಾ ಹಿ ರವರ ದರ್ಗಾ ಮತ್ತು ಜುಮಾ ಮಸೀದಿ ಪಕ್ಕದಲ್ಲಿ ಇಲ್ಲಿ 50 ಲಕ್ಷ ರೂ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯಡಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸ ಮತ್ತು ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿತು.ಶಾಸಕ ಯು.ಟಿ. ಖಾದರ್ ಪ್ರವಾಸೋದ್ಯಮ ಇಲಾಖಯಡಿ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸ ಮತ್ತು ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಿದರು.

ನಂತರ ಶಾಸಕ ಯು.ಟಿ ಖಾದರ್ ಮಾತನಾಡಿ ಪ್ರವಾಸೋಧ್ಯಮದೊಂದಿಗೆ ಸರ್ವಧರ್ಮದ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಯಾತ್ರಿ ನಿವಾಸಗಳ ನಿರ್ಮಾಣ ಕಾರ್ಯಕ್ಕೆ ಹಿಂದಿನ ಸರಕಾರ ಅನುದಾನ ಮೀಸಲಿಟ್ಟಿದ್ದು ಮಂಜನಾಡಿ ಜುಮಾ ಮಸೀದಿಗೆ ಬರುವ ಯಾತ್ರಾರ್ಥಿಗಳಿಗೆ ಸಹಕಾರಿಯಾಗುವಂತೆ ಸುಸಜ್ಜಿತ ಯಾತ್ರಿ ನಿವಾಸದೊಂದಿಗೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಯಲಿದೆ.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಬುಸ್ತಾನುಲ್ ಉಲೂಂ ದರ್ಸ್ ಮತ್ತು ಜುಮಾ ಮಸೀದಿ ಮಂಜನಾಡಿ ಇದರ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ, ಪ್ರ. ಕಾರ್ಯದರ್ಶಿ ಅಬ್ದುಲ್ ಅಝೀಝ್ ಪರ್ತಿಪ್ಪಾಡಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *