Header Ads
Breaking News

ಮಂಜೇಶ್ವರದಲ್ಲಿ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈಗಳ ಜನ್ಮ ದಿನಾಚರಣೆ

ಮಂಜೇಶ್ವರ: ಕನ್ನಡದ ಹಿರಿಯ ಸಾಹಿತಿ ನಾಡೋಜ ಡಾ. ಕಯ್ಯಾರ ಕಿಞಣ್ಣ ರೈಗಳ 104ನೇ ಜನ್ಮ ದಿನಾಚರಣೆ ಮತ್ತು ಗಡಿನಾಡ ಕೇಸರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಜನಾರ್ದನ ಕಲಾವೃಂದ ಜೋಡುಕಲ್ಲು ಇವರ ಸಂಯುಕ್ತ ಆಶ್ರಯದಲ್ಲಿ ಮಂಜೇಶ್ವರದ ಜೆಕೆವಿ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮವನ್ನು ದ.ಕ. ಜಿಲ್ಲಾ ಕ.ಸಾ.ಪ.ದ ಅಧ್ಯಕ್ಷರಾದ ಪ್ರದೀಪ ಕುಮಾರ ಕಲ್ಕೂರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನೇಗಿಲ ಕ್ರಾಂತಿ, ಕನ್ನಡದ ಜಾಗೃತಿ, ಸಾಹಿತ್ಯದ ಆಸಕ್ತಿ ಕಯ್ಯಾರರನ್ನು ಒಂದು ಶಕ್ತಿಯನ್ನಾಗಿ ಮಾಡಿದೆ. ಸಂಸ್ಕೃತ ಪಂಡಿತರಾಗಿ, ಕನ್ನಡ ಹೋರಾಟಗಾರರಾಗಿ, ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯನ್ನು ನೀಡಿದ ಶ್ರೇಷ್ಠ ಅಧ್ಯಾಪಕ ರಾಜಕೀಯ ಸಾಮಾಜಿಕ ಕ್ಷೇತ್ರದಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡ ಅನುಭವದ ಖಜಾನೆ ಕಯ್ಯಾರ ಕಿಞಣ ರೈಗಳು ಎಂದು ಅಭಿಪ್ರಾಯಪಟ್ಟರು.

ಗಟ್ಟಿ ಕನ್ನಡಿಗರಾಗಿ ಕನ್ನಡವನ್ನೇ ಜೀವನವಾಗಿಸಿದವರು ಕಯ್ಯಾರರು.ಅನುಭವ ಸಾಮ್ರಾಜ್ಯದಲ್ಲಿ ಸರಳ ವ್ಯಕ್ತಿತ್ವ ಮತ್ತು ದಿಟ್ಟತನದ ಬರಹಗಳ ಮೂಲಕ, ಹೋರಾಟಗಳ ಮೂಲಕ ಬೆಂಕಿ ಬಿದ್ದಿದೆ ಮನೆಗೆ ಎಚ್ಚೆತ್ತು ಹೋರಾಡಿ ಎಂದು ಕನ್ನಡಿಗರನ್ನು ಒಗ್ಗೂಡಿಸಿ ಹೋರಾಡಿದವರು. ಬಹುಭಾಷಾ ಸಾಧಕರು. ವಿಭಿನ್ನ ಭಾಷಾ ವೀವಿಧ್ಯತೆ ಹೊಂದಿರುವ ಕಾಸರಗೋಡಲ್ಲಿ ಕನ್ನಡಿಗರ ಭಾಷಾ ಪ್ರೇಮ ಗಟ್ಟಿಯಾಗಿ ಉಳಿಯಲು ಇಂತಹ ಚೇತನಗಳೇ ಕಾರಣ ಎಂದು ಅವರು ಹೇಳಿದರು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಕರ್ನಾಟಕ ಇತಿಹಾಸ ಅಕಾಡೆಮಿಯ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರಾದ ಟಿ.ಎಚ್.ಎಮ್. ಬಸವರಾಜ ಬಳ್ಳಾರಿಯವರಿಗೆ ಗಡಿನಾಡ ಕೇಸರಿ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಈ ಸಂದರ್ಭ ಕಾರ್ಯಕ್ರಮದಲ್ಲಿ ರವಿ ನಾಯ್ಕಾಪು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, . ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಪ್ರಸಾದ ರೈ ಕಯ್ಯಾರು, ಮೊದಲಾದವರು ಮುಖ್ಯ ಅಥಿತಿಗಳಾಗಿ ಭಾಗವಹಿಸಿದರು.

Related posts

Leave a Reply

Your email address will not be published. Required fields are marked *