Header Ads
Header Ads
Header Ads
Breaking News

ಮಂಜೇಶ್ವರದಲ್ಲಿ ವಿವಿಧ ಸಮಸ್ಯೆ ಪರಿಹಾರಕ್ಕೆ ಒತ್ತಾಯ : ಸಂಸದರಿಗೆ ಮನವಿ ನೀಡಿದ ಕಾಂಗ್ರೆಸ್ ಮುಖಂಡರು

ನಿತ್ಯವೂ ಅಪಘಾತ ಸಂಭವಿಸುತ್ತಿರುವ ಮಂಜೇಶ್ವರ ರೈಲ್ವೆ ನಿಲ್ದಾಣದಲ್ಲಿ ಮೇಲ್ಸೇತುವೆ ನಿರ್ಮಿಸಬೇಕು, ಮಂಜೇಶ್ವರ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಂತಹ ವ್ಯವಸ್ಥೆಯನ್ನು ಕಲ್ಪಿಸಬೇಕು, ಸಂಪೂರ್ಣವಾಗಿ ಹದೆಗೆಟ್ಟ ತಲಪಾಡಿ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಗೊಂದು ಪರಿಹಾರವನ್ನು ಕಾಣಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಮಂಜೇಶ್ವರ ವಲಯ ಕಾಂಗ್ರೆಸ್ ಮುಖಂಡರು ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿಟ್ಟಾನ್ ರವರ ಕಾಸರಗೋಡು ನಿವಾಸಕ್ಕೆ ತೆರಳಿ ಮನವಿಯನ್ನು ಸಲ್ಲಿಸಿದರು.

ಮಂಜೇಶ್ವರದಲ್ಲಿ ರೈಲ್ವೆ ಅಪಘಾತ ನಿತ್ಯ ಕಥೆಯಾಗಿದೆ. ಕಳೆದ ಎರಡು ವರ್ಷದ ಮಧ್ಯೆ ಮಂಜೇಶ್ವರದಲ್ಲಿ ರೈಲ್ವೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಹತ್ತಕ್ಕೂ ಮೀರಿದೆ. ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗದೆ ಇರುವುದೇ ಇದಕ್ಕೆ ಮುಖ್ಯ ಕಾರಣ. ಅಪಘಾತ ಸಂಭವಿಸಿದಾಗ ಮಾತ್ರ ಎಚ್ಛೆತ್ತುಕೊಳ್ಳುವ ಪ್ರಾದೇಶಿಕ ನೇತಾರರು ಬಳಿಕ ಅಪ್ರತ್ಯಕ್ಷವಾಗುತ್ತಿರುವುದನ್ನು ಸಂಸದರಿಗೆ ಮನವರಿಕೆ ಮಾಡಿದ ನೇತಾರರು ಈ ಸಲ ಹೇಗಾದರೂ ಮಾಡಿ ಮೇಲ್ಸೇತುವೆಯನ್ನು ನಿರ್ಮಿಸುವಂತೆ ಒತ್ತಾಯಿಸಿದರು.
ಎಲ್ಲವನ್ನು ನೂತನ ಶಾಸಕರೊಂದಿಗೆ ಚರ್ಚಿಸಿ ಜೊತೆಯಾಗಿ ಸೇರಿ ಕೊಂಡು ಪರಿಹಾರವನ್ನು ಕಾಣುವುದಾಗಿ ಸಂಸದರು ನಿಯೋಗಕ್ಕೆ ಭರವಸೆಯನ್ನು ನೀಡಿದರು. ಸಂಸದರಿಗೆ ಮನವಿ ನೀಡಲು ತೆರಳಿದ ನಿಯೋಗದಲ್ಲಿ ಮಂಜೇಶ್ವರ ವಲಯ ಕಾಂಗ್ರೆಸ್ ಅಧ್ಯಕ್ಷ ಸುಕುಮಾರ ಶೆಟ್ಟಿ, ,ಯೂತ್ ಕಾಂಗ್ರೆಸ್ ಅಧ್ಯಕ್ಷ ಸಕರಿಯ್ಯಾ ಶಾಲಿಮಾರ್, ಇದ್ರಿಸ್, ಹಮೀದ್, ಸಾಮಾಜಿಕ ಕಾರ್ಯಕರ್ತ ಹನೀಫ್ ಶಾರ್ಜಾ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *