Header Ads
Breaking News

ಮಂಜೇಶ್ವರದಲ್ಲಿ ಸ್ವಚ್ಛತೆಗೆ ಚಾಲನೆ : ತ್ಯಾಜ್ಯ ವಿಲೇವಾರಿಯಿಂದ ಕೊಂಚ ವಿರಾಳರಾದ ಪರಿಸರವಾಸಿಗಳು

ಮಂಜೇಶ್ವರ: ಮಂಜೇಶ್ವರ ಗ್ರಾ.ಪಂ. ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಶೇಖರಣೆಯಾಗಿ ಗಬ್ಬೆದ್ದು ನಾರುತ್ತಿದ್ದ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ಯೋಜನೆಯ ಭಾಗವಾಗಿ ಶುಚಿತ್ವಕ್ಕೆ ಚಾಲನೆ ನೀಡಲಾಯಿತು.

ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಮಳೆಗಾಲಕ್ಕೆ ಮುನ್ನ ಗಬ್ಬೆದ್ದು ನಾರುತ್ತಿರುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಗುತ್ತಿಗೆದಾರನಿಗೆ ಪಂಚಾಯತ್ ಗುತ್ತಿಗೆ ನೀಡಿದೆ.
ಮನೆಗಳಿಂದ, ಮದುವೆ ಸಮಾರಂಭಗಳ, ಹೋಟೆಲುಗಳ ಹಾಗೂ ಕೋಳಿ ಅಂಗಡಿಗಳ ತ್ಯಾಜ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಹಾಕಲಾಗುತ್ತದೆ. ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಲು ಜಿಲ್ಲಾಧಿಕಾರಿಯವರ ನಿರ್ದೇಶನದಂತೆ ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾಗಳನ್ನು ಸ್ಥಾಪಿಸಲಾಗುತಿದ್ದರೂ ಕ್ಯಾಮರಾವನ್ನು ತಪ್ಪಿಸಿ ರಾತ್ರಿ ಹಾಗೂ ಮುಂಜಾನೆ ಸಮಯಗಳಲ್ಲಿ ತ್ಯಾಜ್ಯಗಳನ್ನು ತಂದು ಹಾಕುತ್ತಿರುವುದಾಗಿ ಹೇಳಲಾಗುತ್ತಿದೆ. ತ್ಯಾಜ್ಯ ಎಸೆಯುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗದೇ ಇಂತಹ ನೀಚ ಕೆಲಸದಿಂದ ತ್ಯಾಜ್ಯ ಎಸೆಯುವವರು ಹಿಂದೆ ಸರಿಯಲಾರರು ಎಂಬುವುದು ಇಲ್ಲಿಯ ನಾಗರಿಕರ ಹೇಳಿಕೆ. ಅಂತೂ ಈಗ ಸದ್ಯಕ್ಕೆ ತ್ಯಾಜ್ಯ ವಿಲೇವಾರಿಯಾಗುತ್ತಿರುವುದು ಪರಿಸರವಾಸಿಗಳಿಗೆ ಅಲ್ಪ ಸಮಾಧಾನವನ್ನು ತಂದು ಕೊಟ್ಟಿದೆ.

Related posts

Leave a Reply

Your email address will not be published. Required fields are marked *