Header Ads
Breaking News

ಮಂಜೇಶ್ವರದ ಉಮ್ಮರ್ ಕಂಠದಲ್ಲಿ ಮಧುರವಾದ ಹಾಡು : ಸಾಮಾಜಿಕ ಜಾಲತಾಣದಲ್ಲಿ ಹಾಡು ಸಖತ್ ವೈರಲ್

ಮಂಜೇಶ್ವರ: ನಾಡಿನ ಅಭಿವೃದ್ದಿಗಾಗಿ ರಾಜಕೀಯ ಪಕ್ಷಗಳು ಹಾಗೂ ಹಲವು ಸಂಘಟನೆಗಳು ದಿಕ್ಕಾರಗಳನ್ನು ಕೂಗಿ ಪೊಲೀಸರಿಂದ ಲಾಠಿ ರುಚಿ ಪಡೆದು ಪ್ರತಿಭಟನೆಯನ್ನು ನಡೆಸುತ್ತಿರುವ ಮಧ್ಯೆ . ಇಲ್ಲೊಬ್ಬ ಕಲಾವಿದನೊಬ್ಬ ತನ್ನ ಮಧುರವಾದ ಕಂಠದಲ್ಲಿ ಹಾಡಿಕೊಂಡು ಅದನ್ನು ಯು ಟ್ಯೂಬಿನಲ್ಲಿ ಅಪ ಲೋಡ್ ಮಾಡಿ ಜನರ ಗಮನ ಸೆಳೆಯುವುದರ ಜೊತೆಯಾಗಿ ಸಂಬಂಧಪಟ್ಟ ಅಧಿಕಾರಿಗಳಿಗೂ ಅದೇ ರೀತಿ ಜನಪ್ರತಿನಿಧಿಗಳಿಗೂ ತಾಕೀತಾಗುತಿದ್ದಾನೆ. ನಾಡಿನ ಸಮೃದ್ಧಿ ಹಾಗೂ ಒಳಿತಿಗಾಗಿ ತನ್ನ ಇಂಪಾದ ಹಾಡಿನೊಂದಿಗೆ ಸಮಾಜದ ಮುಂದೆ ಬರುವ ಈ ಕಲಾವಿದನಿಗೆ ಮಂಜೇಶ್ವರದ ಜನತೆ ಪೂರ್ಣವಾದ ಸಹಕಾರವನ್ನು ನೀಡಿ ಬೆಂಬಲಿಸುತ್ತಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೊಸೋಟು ಲಕ್ಷಮ್ ವೀಡು ಕಾಲನಿಯ ಆಹ್ಮದ್ ಅಲೀಮಾ ದಂಪತಿಗಳ ಏಕ ಪುತ್ರನಾಗಿರುವ ಉಮ್ಮರ್ ಎಂಬ ಈ ಕಲಾವಿದ ಸರಕಾರ ನೀಡಿದ ಮೂರೂ ಸೆಂಟ್ಸ್ ಭೂಮಿಯಲ್ಲಿ ತನ್ನ ಪತ್ನಿ ಮೂರು ಮಕ್ಕಳು ಹಾಗೂ ವೃದ್ಧೆಯಾಗಿ ಕುರುಡಿಯಾಗಿರುವ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದಾನೆ. ಕಣ್ಣು ಕಾಣದ ವೃದ್ದೆಯಾದ ತಾಯಿಯ ಸೇವೆಯಲ್ಲೂ ಮುಂಚೂಣಿಯಲ್ಲೇ ನಿಂತಿದ್ದಾನೆ.

ಕೇರಳದಲ್ಲಿ ಕಳೆದ ವರ್ಷ ಸಂಭವಿಸಿದ ಪ್ರಳಯದ ಬಗ್ಗೆ ಈ ಕಲಾವಿದ ಹಾಡಿದ ಹಾಡುಗಳನ್ನು ಲಕ್ಷಾಂತರ ಮಂದಿ ಯು ಟ್ಯೂಬಿನಲ್ಲಿ ವೀಕ್ಷಿಸಿದ್ದು ಮಾತ್ರವಲ್ಲದೆ ಆ ಹಾಡು ದೇಶ ವಿದೇಶಗಳಲ್ಲೂ ವೈರಲ್ ಆಗಿತ್ತು. ಆ ಬಳಿಕ ಹೊಂಡಗಳಿಂದ ತುಂಬಿದ ಹದೆಗೆಟ್ಟ ಕಾಸರಗೋಡು ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯ ಬಗ್ಗೆ ಹಾಡಿರುವ ವೀಡಿಯೋ ಕಾಸರಗೋಡಿನ ಯುಡಿಎಫ್ ನಾಯಕರಿಗೆ ಅದೊಂದು ಅಸ್ತ್ರದ ರೀತಿಯಲ್ಲಿ ಬಳಕೆಯಾಗಿ ಭಾರಿ ವೈರಲಾಗಿತ್ತು . ಇದೀಗ ಕೊರೋನಾ ಮಹಾಮಾರಿ ಜಾಗೃತೆಯನ್ನು ಮೂಡಿಸುವ ರೀತಿಯಲ್ಲಿ ಕನ್ನಡ ಭಾಷೆಯಲ್ಲಿ ಹಾಡಿದ ಹಾಡು ಭಾರಿ ವೈರಲಾಗಿದೆ. ಪ್ರತಿಯೊಂದು ದುರಂತದ ಬಗ್ಗೆಯೂ ಅದೇ ರೀತಿ ಗಾಢ ನಿದ್ರೆಯಲ್ಲಿರುವ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸುವ ರೀತಿಯಲ್ಲಿ ಇಂಪಾದ ರಾಗದಲ್ಲಿ ತನ್ನ ಪ್ರತಿಷೇಧವನ್ನು ತೋರ್ಪಡಿಸುತ್ತಿರುವುದು ಪರಿಣಾಮಕಾರಿಯಾದ ರೀತಿಯಲ್ಲಿ ಯಶಸ್ವನ್ನು ಕಾಣುತ್ತಿರುವುದು ವಿಶೇಷವಾಗಿದೆ. ಕನ್ನಡ , ಮಲಯಾಳಂ , ಬ್ಯಾರಿ, ತುಳು ಹಾಗೂ ಹಿಂದಿ ಭಾಷೆಗಳಲ್ಲಿ ಈತ ಹಾಡಬಲ್ಲವನಾಗಿದ್ದಾನೆ.

ಲಾಕ್ ಡೌನ್ ಕಾಲದಲ್ಲಿ ಕೊರೊನ ವೈರಸ್ ಬಗ್ಗೆ ಹಾಡಿರುವ ಹಾಡು ಯು ಟ್ಯೂಬಿನಲ್ಲಿ ಅಪ್ ಲೋಡಾದ ತಾಸುಗಳೊಳಗೆ ಲಕ್ಷಾಂತರ ಮಂದಿ ವೀಕ್ಷಿಸಿ ದೇಶ ವಿದೇಶಗಳಿಂದ ಮೆಚ್ಚುಗೆಯನ್ನು ವ್ಯಕ್ಳ್ತಪಡಿಸಿರುವುದು ವಿಶೇಷತೆಯಾಗಿದೆ. ವೈರಲಾಗಿರುವ ಈ ವೀಡಿಯೊ ಸಾಮಾಜಿಕ ಜಾಲ ತಾಣಗಳಲ್ಲಿ ಈಗಲೂ ಹರಿದಾಡುತ್ತಿದೆ. ಈ ಕಲಾವಿದನ ಚಟುವಟಿಕೆಗಳಿಗೆ ಮಂಜೇಶ್ವರದ ಕಲಾಪ್ರೇಮಿಗಳು ಹಾಗೂ ಸಮಾಜ ಸೇವಕರು ಜನತಪೂರ್ಣ ಸಹಕಾರವನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *