Header Ads
Header Ads
Breaking News

ಮಂಜೇಶ್ವರದ ಮರ್ಸಿ ಅಮ್ಮನವರ ದೇವಾಲಯದ ಮೇಲಿನ ದಾಳಿಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಪ್ರತಿಭಟನೆ

ಮಂಜೇಶ್ವರದ ಮರ್ಸಿ ಅಮ್ಮನವರ ದೇವಾಲಯದ ಮೇಲಿನ ದಾಳಿಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಸೌಹಾರ್ದ ರ್‍ಯಾಲಿ ಹಾಗೂ ಪ್ರತಿಭಟನೆ ನಡೆಯಿತು. ಮಂಜೇಶ್ವರದಿಂದ ಪ್ರಾರಂಭಗೊಂಢ ಜಾಥಾ ಮಂಜೇಶ್ವರ ಚರ್ಚ್ ಪರಿಸರದಲ್ಲಿ ಸಮಾಪ್ತಿಗೊಂಡಿತು. ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷ ಎಕೆಎಂ ಅಶ್ರಫ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಕಾಸರಗೋಡು ಜಿ.ಪಂ.ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ.ವಿ.ಬಾಲಕೃಷ್ಣನ್ ಮಾಸ್ತರ್, ಬಿಜೆಪಿ ಮುಖಂಡ ಹರೀಶ್ಚಂದ್ರ ಮಂಜೇಶ್ವರ, ಮುಂತಾದವರು ಮಾತನಾಡಿದರು. ಮಂಜೇಶ್ವರ ಪಂಚಾಯತು ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ಮಂಜೇಶ್ವರ ಚರ್ಚ್ ಧರ್ಮಗುರು ರೆ.ಫಾ.ವಿನ್ಸೆಂಟ್ ವಿನೋದ್ ಸಲ್ದಾನ ಸೇರಿದಂತೆ ಹಲವು ನೇತಾರರು ಪಾಲ್ಗೊಂಡರು. ಅವ್ಯಾಹತವಾಗಿ ನಡೆಯುತ್ತಿರುವ ಮರಳು ಮಾಫಿಯಾಗಳ ಅಟ್ತಹಾಸ ಮತ್ತೆ ಮರುಕಳಿಸಿದರೆ ಅದೇ ರೀತಿ ಅಕ್ರಮ ಮರಳು ಸಾಗಾಟ ಆರಂಭಗೊಂಡರೆ ಅದಕ್ಕೆ ಪೊಲೀಸರೇ ಕಾರಣವಾಗಬಹುದು. ಮರಳು ಸಾಗಾಟವನ್ನು ಹತ್ತಿಕ್ಕಲು ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಬೇಕಾಗಿಯೂ ನೇತಾರರು ಆಗ್ರಹಿಸಿದರು. ರಾಜಕೀಯ ನೇತಾರರೊಂದಿಗೆ ವಿವಿಧ ಸಂಘಟನೆಗಳ ನೇತಾರರೂ ಕೈ ಜೋಡಿಸಿದರು.

Related posts

Leave a Reply

Your email address will not be published. Required fields are marked *