Header Ads
Header Ads
Breaking News

ಮಂಜೇಶ್ವರದ ರೈಲ್ವೇ ಮೇಲ್ಸೇತುವೆಗೆ ಮತ್ತೆ ಕವಿದಿರುವ ಅನಿಶ್ಚಿತತೆಯ ಮೋಡ..!ಸ್ಥಳೀಯರಲ್ಲಿ ಹೆಚ್ಚಿದ ಆತಂಕ ..!

 ಮಂಜೇಶ್ವರದ ರೈಲ್ವೇ ಮೇಲ್ಸೇತುವೆಗೆ ಮತ್ತೆ ಅನಿಶ್ಚಿತತೆಯ ಮೋಡ ಕವಿದಿದೆ. ಅಪಘಡ ನಡೆದಾಗ ಮಾತ್ರ ಎಚ್ಚೆತ್ತುಗೊಳ್ಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮತ್ತೆ ಮೌನಕ್ಕೆ ಶರಣಾಗಿರುವುದು ಸ್ಥಳೀಯರಲ್ಲಿ ಇನ್ನೂ ಹೆಚ್ಚಿನ ಆತಂಕವನ್ನು ಸೃಷ್ಟಿಸಿದೆ. ಇನ್ನೊಂದು ದುರಂತಕ್ಕೆ ಸಾಕ್ಷಿಯಾಗುವ ಮೊದಲು ರೈಲ್ವೇ ಮೇಲ್ಸೇತುವೆಗೆ ಮುಕ್ತಿ ಕಲ್ಪಿಸಬೇಕಿದೆ.

ಹೌದು.. ಮಂಜೇಶ್ವರದ ರೈಲ್ವೇ ಮೇಲ್ಸೇತುವೆ ಅಪಘಾತಗಳ ಆಗರವಾಗಿದ್ದು, ಇಲ್ಲಿ ಮೇಲ್ಸೇತುವೆ ನಿರ್ಮಿಸಬೇಕೆಂದು ಹಲವು ಬಾರಿ ಮನವಿ ನೀಡಿದರೂ ಯಾವುದೇ ಫಲಶ್ರುತಿ ಕಂಡಿರಲಿಲ್ಲ. ಹೆದ್ದಾರಿಯಿಂದ ಒಳಪೇಟೆಗೆ ತೆರಳಬೇಕಾದರೆ ರೈಲು ಹಳಿಯನ್ನು ದಾಟಿಯೇ ಸಾಗಬೇಕಾಗಿದ್ದು, ಪ್ರತಿನಿತ್ಯ ಸಾವಿರಾರು ಮಂದಿ ಈ ಅಪಾಯಕಾರಿ ಹಾದಿಯನ್ನೇ ಬಳಸುತ್ತಿದ್ದಾರೆ. ರೈಲು ಪ್ರಯಾಣಿಕರಿಗೆ ರೈಲು ನಿಲ್ದಾಣವನ್ನು ದಾಟಲು ಮೇಲ್ಸೇತುವೆ ಇದೆ. ಒಳಪೇಟೆಯಿಂದ ಬರುವ ರಸ್ತೆಯಿಂದ ಸುಮಾರು 250 ಮೀಟರ್ ದೂರದಲ್ಲಿ ಈ ಮೇಲ್ಸೇತುವೆ ಇದ್ದು, ದಾರಿಹೋಕರು ಅದರ ಮೇಲಿನಿಂದ ದಾಟಿ ಹೆದ್ದಾರಿಯಲ್ಲಿರುವ ಬಸ್‌ನಿಲ್ದಾಣ ತಲುಪುವಾಗ ಒಂದು ಕಿ.ಮೀ. ಆಗುತ್ತದೆ. ಆದ್ದರಿಂದ ದಾರಿಹೋಕರು ಅಪಾಯಕಾರಿಯಾದರೂ ರೈಲು ಹಳಿಯನ್ನು ದಾಟಿಯೇ ಹೋಗುತ್ತಾರೆ.
ಇದೀಗ ನೂತನವಾಗಿ ಆಯ್ಕೆಯಾದ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತಾನ್ ಕೂಡಾ ಚುನಾವಣೆಗೆ ಮೊದಲು ಇಲ್ಲಿಯ ಮೇಲ್ಸೇತುವೆಗೆ ಮೊದಲ ಆಧ್ಯತೆಯನ್ನು ನೀಡುವುದಾಗಿ ಹೇಳಿದ್ದರೂ ಈ ತನಕ ಇಲ್ಲಿಯ ಸ್ಥಳವನ್ನು ಕೂಡಾ ಸಂದರ್ಶಿಸಿಲ್ಲವೆಂಬುದಾಗಿ ಊರವರು ಆಡಿಕೊಳ್ಳುತಿದ್ದಾರೆ. ಯೋಜನೆಗೆ ಸುಮಾರು ಒಂದೂವರೆ ಕೋಟಿರೂ.ಗಳಷ್ಟು ವೆಚ್ಚ ತಗುಲಲಿದೆ ಎಂದು ಅಂದಾಜಿಸಲಾಗಿದ್ದು, ಜಿಲ್ಲಾ ರೈಲ್ವೇ ವಿಭಾಗದ ಪ್ರಬಂಧಕರು ಸಹಿತ ಅಧಿಕಾರಿಗಳು ಸ್ಥಳ ಸಂದರ್ಶಿಸಿದ ಬಳಿಕ ನಾಗರಿಕರಿಂದ ಮಾಹಿತಿ ಸಂಗ್ರಹಿಸಿ ಯೋಜನೆಗೆ ನೀಲ ನಕಾಶೆ ತಯಾರಿಸಲಾಗುವುದು ಎಂದು ಹೇಳಿದವರು ನಾಪತ್ತೆಯಾಗಿ ವರ್ಷಗಳೇ ಕಳೆದಿದೆ. ಈಗ ಅವರು ಎಲ್ಲಿದ್ದಾರೆ ಎಂಬುದು ಇಲ್ಲಿಯ ನಾಗರಿಕರ ಪ್ರಶ್ನೆ.

s

ಈಗಾಗಲೇ ಈ ರೈಲ್ವೇ ಹಳಿಯಲ್ಲಿ ಹಲವು ಮರಣಗಳು ಸಂಭವಿಸಿದೆ. ಇದು ರಾಷ್ಟ್ರ ಮಟ್ಟದಲ್ಲಿ ಕೂಡಾ ಸುದ್ದಿ ಕೂಡಾ ಆಗಿತ್ತು. ಆದರೆ ನಮ್ಮ ಜನಪ್ರತಿನಿಧಿಗಳು ಹಾಗೂ ನೇತಾರರು ಇನ್ನೂ ಗಾಢ ನಿದ್ರೆಯಿಂದ ಎಚ್ಚೆತ್ತುಗೊಳ್ಳದಿದ್ದರೆ ಇನ್ನು ಮುಂದಕ್ಲ್ಕೆ ಸಂಭವಿಸುವ ಅನಾಹುತಕ್ಕೆ ಅವರೇ ಕಾರಣಕರ್ತರಾಗಬಹುದಾಗಿ ಊರವರು ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ.

Related posts

Leave a Reply

Your email address will not be published. Required fields are marked *