Header Ads
Header Ads
Breaking News

ಮಂಜೇಶ್ವರದ ವಿದ್ಯಾರ್ಥಿ ಅಪಹರಣದಲ್ಲಿ ನಿಗೂಢತೆ : ಪೊಲೀಸರಿಂದ ಮುಂದುವರಿದ ತನಿಖೆ

ಕಾರಿನಲ್ಲಿ ಬಂದ ತಂಡ ವಿದ್ಯಾರ್ಥಿಯನ್ನು ಅಪಹರಿಸಿದ ಘಟನೆ ಹಲವಾರು ನಿಗೂಢತೆಗಳನ್ನು ಸೃಷ್ಟಿಸಿದೆ. ಸೋಮವಾರ ಬೆಳಿಗ್ಗೆ ಸ್ಕೂಟರಿನಲ್ಲಿ ತೆರಳುತ್ತಿದ್ದ ಕಳಿಯೂರು ಕೋರಿಕ್ಕಾರ್ ನಿವಾಸಿ ಅಬ್ದುಲ್ ರಹ್ಮಾನ್ ಹಾರೀಸ್ ನನ್ನು ಕಾರಿನಲ್ಲಿ ಬಂದ ತಂಡ ಅಪಹರಣ ನಡೆಸಿತ್ತು. ಆ ಬಳಿಕ ತಂಡ ಸಂಬಂಧಿಕರಿಗೆ ಹಾರೀಸ್ ಮೂಲಕ ಸಂದೇಶ ನೀಡಿ 3 ಕೋಟಿ ರೂ. ನೀಡಿದರೆ ಬಿಡುಗಡೆಗೊಳಿಸುವುದಾಗಿ ತಿಳಿಸಿರುವುದಾಗಿ ಸಂಬಂಧಿಕರು ತಿಳಿಸಿದ್ದಾರೆ.

ಸೋಮವಾರದಂದು ಬೆಳಿಗ್ಗೆ ಹಾರಿಸ್ ತಂಗಿಯೊಂದಿಗೆ ಬೈಕಿನಲ್ಲಿ ಬಸ್ಸು ನಿಲ್ದಾಣದತ್ತ ಬರುತ್ತಿರುವ ದಾರಿ ಮಧ್ಯೆ ಕಳಿಯೂರು ಎಂಬಲ್ಲಿ ಬೈಕನ್ನು ಕಾರಿನಲ್ಲಿ ಬಂದ ತಂದ ತಂಡವೊಂದು ಅಡ್ದಗಟ್ಟಿ ಬೈಕನ್ನು ಹಾಗೂ ಸಹೋದರಿಯನ್ನು ಅಲ್ಲೇ ಉಪೇಕ್ಷಿಸಿ ಹಾರಿಸ್ ನನ್ನು ಶಿಫ್ಟ್ ಕಾರಿನೊಳಗೆ ಹಾಕಿ ಅಪಹರಿಸಿದ್ದರು.ಈ ಅಪಹರಣ ಹಲವಾರು ಪ್ರಕರಣಗಳ ಆರೋಪಿಯಾಗಿರುವ ನಪ್ಪಟ ರಫೀಕ್‌ನ ಸಹಚರರು ನಡೆಸಿರುವುದಾಗಿ ಪೊಲೀಸರಿಗೆ ಸೂಚನೆ ಲಭಿಸಿದೆ. ಆದರೆ ನಪ್ಪಟ ರಫೀಕ್ ಕೊಲ್ಲಿ ರಾಷ್ಟ್ರದಲ್ಲಿದ್ದು, ಈತ ಅಂಡರ್ ವರ್ಲ್ಡ್ ನ ತಂಡದ ಜೊತೆಯಾಗಿರುವುದಾಗಿ ತಿಳಿದು ಬಂದಿದೆ.

ಹಾರಿಸ್ ನ ತಂದೆ ಕೊಲ್ಲಿ ರಾಷ್ಟ್ರದಲ್ಲಿ ಮನೆ ಡ್ರೈವರಾಗಿ ದುಡಿಯುತಿದ್ದಾರೆ. ಹಾರಿಸ್ ನ ಮಾವನಿಗೆ ದೊಡ್ದ ಮಕ್ಕಳು ಇಲ್ಲವಾಗಿರುವುದರಿಂದ ಹಾರಿಸ್ ನನ್ನು ಅಪಹರಣ ಗೈದು ತಂಡ ಹಣಕ್ಕಾಗಿ ಬೇಡಿಕೆ ಇಟ್ಟಿದೆ.ಹಾರಿಸ್ ನ ಅಪಹರಣದಿಂದ ಈತನ ತಾಯಿ ಹಾಗೂ ಸಹೋದರಿಯರು ಕಂಗಾಲಾಗಿದ್ದಾರೆ. ಕಳೆದ ಮೂರು ದಿನಗಳಿಂದ ಈ ಮನೆಯಲ್ಲಿ ಯಾರೂ ಸರಿಯಾಗಿ ಅನ್ನ ಸೇವಿಸಲಿಲ್ಲವೆಂಬುದಾಗಿ ಈತನ ತಾಯಿಯ ಮನದಾಳದ ಮಾತು.

ಯಾರೋ ಮಾಡಿದ ತಪ್ಪಿಗಾಗಿ ಇಡಿಗ ವಿದ್ಯಾರ್ಥಿ ಅಪಹರಣ ತಂಡಕ್ಕೆ ಬಲಿ ಬಶುವಾಗಿದ್ದಾನೆ. ಅಪಹರಿಸಿದ ತಂಡ ವಿದ್ಯಾರ್ಥಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಟ್ಟಿರುವುದಾಗಿ ಸೂಚನೆ ಇದೆಯಾದರೂ ಖಚಿತವಾಗಿಲ್ಲ.

ಪ್ರಕರಣಕ್ಕೆ ಸಂಬಂಧಿಸಿ ಹಾರೀಸ್ ಅವರ ಸಹೋದರಿ ಆಯಿಷತ್ ಅಫೀದಾ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ನಾಲ್ವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಈಗ ವಿದ್ಯಾರ್ಥಿ ಪೈವಳಿಕೆಯ ಗೂಂಡಾ ನೊಬ್ಬನ ವಶದಲ್ಲಿರುವ ಬಗ್ಗೆ ಸೂಚನೆ ಲಭಿಸಿದೆ. ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿ ಕಾಸರಗೋಡು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳು ಮಂಜೇಶ್ವರದಲ್ಲಿ ಠಿಕಾಣಿ ಹೂಡಿ ತನಿಖೆ ನಡೆಸುತಿದ್ದಾರೆ.

Related posts

Leave a Reply

Your email address will not be published. Required fields are marked *