Header Ads
Header Ads
Breaking News

ಮಂಜೇಶ್ವರ : ಐದು ಎಕ್ರೆ ಕೃಷಿ ಭೂಮಿಗೆ ಕೊಳಚೆ ನೀರನ್ನು ಬಿಟ್ಟು ಅಮಾನವೀಯತೆ ಮೆರೆದ ದುರುಳರು

ಮಂಜೇಶ್ವರ ಗ್ರಾ. ಪಂ. ನ ಹನ್ನೊಂದು ಹಾಗೂ ಹದಿನಾಲ್ಕು ವಾರ್ಡು ಮಿತ್ತ ಕನಿಲ ಎಂಬಲ್ಲಿರುವ ಸುಮಾರು ಐದು ಎಕ್ರೆ ಕೃಷಿ ಭೂಮಿಗೆ ಹೊಸಂಗಡಿಯಲ್ಲಿರುವ ವಾಣಿಜ್ಯ ಮಳಿಗೆ ಹಾಗೂ ಕ್ವಾರ್ಟರ್ಸ್‍ನ ಮಾಲಕರುಗಳು ದುಗರ್ಂಧ ಬೀರುವ ಕೊಳಚೆ ನೀರನ್ನು ಹರಿಯಲು ಬಿಟ್ಟಿರುವುದಾಗಿ ಆರೋಪ ಕೇಳಿ ಬಂದಿದೆ.

ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೊಂಡಿರುವ ಈ ಗದ್ದೆಯ ಸಮೀಪ ನೀರು ಹರಿದು ಹೋಗುತ್ತಿರುವ ತೋಡು ಇದ್ದು, ಹೊಸಂಗಡಿ ಪರಿಸರದಿಂದ ತೋಡಿಗೆ ಪಾಯಿಖಾನೆಯ ಹಾಗೂ ಇತರ ದುಗರ್ಂಧ ಬೀರುವ ಕೊಳಚೆ ನೀರನ್ನು ಹರಿಯ ಬಿಡಲಾಗಿದ್ದು, ಈ ಹಿನ್ನೆಲೆಯಲ್ಲಿ ತೋಡಿನಿಂದ ಹರಿದು ಬಂದ ಕೊಳಚೆ ನೀರು ಕೃಷಿಗಾಗಿ ಮೀಸಲಿಟ್ಟಿರುವ ಗದ್ದೆಯಲ್ಲಿ ಶೇಖರಣೆಯಾಗಿದೆ. ಇದರ ದುರ್ನಾತದಿಂದ ಗದ್ದೆಯ ಹತ್ತಿರ ಸುಳಿಯಲು ಕೂಡಾ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವುದಾಗಿ ಸ್ಥಳೀಯರು ಆರೋಪಿಸುತಿದ್ದಾರೆ.

ಮಾತ್ರವಲ್ಲದೆ ಈ ಪರಿಸರದಲ್ಲಿ ಸುಮಾರು 75 ಕುಟುಂಬಗಳಿವೆ, ಸುಮಾರು ಐವತ್ತು ಬಾವಿಗಳಿವೆ ಮಾತ್ರವಲ್ಲದೆ ಇದರ ಸಮೀಪವೇ ಸುಮಾರು 1800 ವಿದ್ಯಾರ್ಥಿಗಳು ವಿದ್ಯಾರ್ಜನೆಗೈಯುತ್ತಿರುವ ಮಲ್ ಹರ್ ಎಂಬ ವಿದ್ಯಾ ಸಂಸ್ಥೆ ಕೂಡಾ ಇದೆ.

ಈ ಕೊಳಚೆ ನೀರಿನಿಂದ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಜೊತೆಯಾಗಿ ಇದೇ ಪರಿಸರದಲ್ಲಿರುವ ಸುಮಾರು ಐವತ್ತು ಬಾವಿಗಳಿಗೆ ಕೂಡಾ ಈ ಕೊಳಚೆ ನೀರು ಹರಿದು ಹೋಗುವ ಸಾಧ್ಯತೆ ಇದೆ. ಇದನ್ನು ಮನಗಂಡು ಮುನ್ನೆಚ್ಚರಿಕೆಯ ಕ್ರಮವನ್ನು ಕೈ ಗೊಳ್ಳಲು ಸ್ಥಳೀಯರು ಅರೋಗ್ಯ ಇಲಾಖೆ ಹಾಗೂ ಗ್ರಾ. ಪಂ. ಗೆ ಮಾಹಿತಿಯನ್ನು ನೀಡಿದ್ದಾದರೂ ಕೊಳಚೆ ನೀರನ್ನು ಖಾಲಿ ಮಾಡಲು ಈ ತನಕ ಯಾರೂ ಮುಂದಾಗಿಲ್ಲವೆಂಬುದಾಗಿ ಊರವರು ಹೇಳುತಿದ್ದಾರೆ.

ಮಳೆಗಾಲಕ್ಕೆ ಮುಂಚಿತವಾಗಿ ಆಯಾ ವಾರ್ಡುಪರಿಸರವನ್ನು ಶುಚಿಯಾಗಿಸಲು ಪ್ರತೀ ವಾರ್ಡಿಗೆ 25 ಸಾವಿರ ರೂ. ನಂತೆ ಸರಕಾರ ಗ್ರಾ. ಪಂ. ಗೆ ನೀಡಿದೆಯಾದರೂ ಮಂಜೇಶ್ವರ ಗ್ರಾ. ಪಂ. ನ ಯಾವುದೇ ವಾರ್ಡಿನಲ್ಲೂ ಈ ಶುಚಿತ್ವ ನಡೆದಿಲ್ಲವೆಂಬುದಾಗಿ ಸಿಪಿಎಂ ನೇತಾರ ಕೆ ಆರ್ ಜಯಾನಂದ ಆರೋಪಿಸಿದ್ದಾರೆ.

ಸ್ಥಳೀಯರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಮೊದಲು ಸಂಬಂಧಪಟ್ಟವರು ಇತ್ತ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *