Header Ads
Header Ads
Breaking News

ಮಂಜೇಶ್ವರ : ಕಾಮಗಾರಿಗೊಂಡು ಕೆಲವೇ ದಿನದಲ್ಲಿ ಹದಗೆಟ್ಟ ರಸ್ತೆ

ತಿಂಗಳಿಗೆ ಮುಂಚಿತವಾಗಿ ಕಾಮಗಾರಿ ಪೂರ್ಣಗಂಡ ಮಂಜೇಶ್ವರ Govinda Pai College Kadambadi ತನಕ ಸುಮಾರು 5.5ಕಿಲೋ ಮೀಟರ್ ರಸ್ತೆ ಗತ್ತಿಗೆದಾರನ ಎಡವಟ್ತನಿಂದಾಗಿ ಸಂಪೂರ್ಣವಾಗಿ ಹದೆಗೆಟ್ಟು ವಾಹನ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಕೇಂದ್ರ ಸರಕಾರದ ಸಡಕ್ ಯೋಜನೆಯ ಪ್ರಕಾರ ಮೂರು ಕೋಟಿ 65 ಲಕ್ಷ ರೂ. ಮಂಜೂರಾಗಿ ಆರಂಭದ ಕೆಲಸದಲ್ಲಿ ಗುತ್ತಿಗೆದಾರ ಕಳಪೆ ಕಾಮಗಾರಿಯನ್ನು ಪ್ರದರ್ಶಿಸಿದಾಗ ಊರವರು 6 ತಿಂಗಳುಗಳ ತನಕ ಈ ರಸ್ತೆಯ ಕಾಮಗಾರಿಗೆ ತಡೆಯೊಡ್ದಿದ್ದರು. ಬಳಿಕ ಗುತ್ತಿಗೆದಾರ ಅಂಗಲಾಚಿ ಬೇಡಿಕೊಂಡು ಇನ್ನು ಮುಂದಕ್ಕೆ ಯಾವುದೇ ಕಳಪೆಕಾಮಗಾರಿ ನಡೆಯಲಿಕ್ಕಿಲ್ಲವೆಂಬ ಕರಾರಿನಲ್ಲಿ ಊರವರು ಮರು ಕಾಮಗಾರಿಗೆ ಅನುವು ಮಾಡಿ ಕೊಟ್ಟಿದ್ದರು. ಆದರೆ ನಾಯಿ ಬಾಲ ಡೊಂಕೇ ಎಂಬ ರೀತಿಯಲ್ಲಿ ಗುತ್ತಿಗೆದಾರ ಆತನ ಅದೇ ಹಳೆಯ ಚಾಳಿಯನ್ನು ಕಾಮಗಾರಿಯನ್ನು ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಕಾಮಗಾರಿ ಕಳೆದು ತಿಂಗಳು ಕಳೆಯುವ ಮೊದಲೇ ಹೊಂಡಗಳು ಎದ್ದುಕೊಂಡಿವೆ.

ಇದೀಗ ಗೋವಿಂದ ಪೈ ರಸ್ತೆಯಿಂದ ಕೆದಂಬಾಡಿ ತನಕ ಬೃಹತ್ತಾಕರದ ಹೊಂಡಗಳು ಸೃಷ್ಟಿಯಾಗಿವೆ. ಘನ ವಾಹನಗಳಿರಲಿ ಧ್ವಿಚಕ್ರವಾಹನಗಳಿಗೆ ಕೂಡಾ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಕೇಂದ್ರ ಸರಕಾರದ ಸಡಕ್ ಯೋಜನೆಯ ಪ್ರಕಾರ ಈ ರಸ್ತೆ ನಿರ್ಮಾಣವಾಗಿಲ್ಲ. ಪ್ರತೀ ವರ್ಷ ಕೂಡಾ ಈ ರಸ್ತೆಯ ಮರು ಡಾಮಾರೀಕರಣಕ್ಕಾಗಿ ಸರಕಾರದ ವತಿಯಿಂದ ಕೋಟ್ಯಾಂತರ ರೂ. ಗಳು ಮಂಜೂರಾಗುತಿದ್ದರೂ. ಇದನ್ನು ಪಡೆಕೊಳ್ಳುತ್ತಿರುವ ಗುತ್ತಿಗೆದಾರ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿ ಅಲ್ಲಿಂದಲ್ಲಿಗೆ ಸರಿ ಮಾಡಿ ಕೋಟ್ಯಾಂತರ ರೂ. ಗಳನ್ನು ಗುಳುಂ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ರಸ್ತೆ ಕಾಮಗಾರಿಯ ಬಗ್ಗೆ ವಿಜಿಲೆನ್ಸ್ ತನಿಖೆ ನಡೆಯಬೇಕೆಂಬುದಾಗಿ ಊರವರು ಆಗ್ರಹಿಸಿದ್ದಾರೆ.

 

Related posts

Leave a Reply

Your email address will not be published. Required fields are marked *