Header Ads
Breaking News

ಮಂಜೇಶ್ವರ ಕಿರು ಬಂದರಿನ ಉದ್ಘಾಟನಾ ಕಾರ್ಯಕ್ರಮ

ಮಂಜೇಶ್ವರ: ಮಂಜೇಶ್ವರ ಕಿರು ಬಂದರಿನ ಉದ್ಘಾಟನಾ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು. ವೀಡಿಯೋ ಕಾನ್ಪರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಂದರಿಗೆ ಚಾಲನೆ ನೀಡಿದರು. ಇದರೊಂದಿಗೆ ಕೊಯಿಲಾಂಡಿಯ ಬಂದರನ್ನೂ ಅವರು ಉದ್ಘಾಟಿಸಿದರು.

ಕಾಸರಗೋಡು ಜಿಲ್ಲೆಯ ಮೀನುಗಾರಿಕೆ ವಲಯಕ್ಕೆ ಹೊಸ ಹುರುಪು ನೀಡುವ ನಿಟ್ಟಿನಲ್ಲಿ ಮಂಜೇಶ್ವರದಲ್ಲಿ ಬಂದರು ನಿರ್ಮಾಣಗೊಳ್ಳಬೇಕು ಎಂಬ ಬೇಡಿಕೆ ತುಂಬ ಹಳೆಯದು. ಜಿಲ್ಲೆಯ ಕೊಯಿಪ್ಪಾಡಿ, ಶಿರಿಯ, ಬಂಗ್ರ ಮಂಜೇಶ್ವರ ಮತ್ಸ್ಯ ಗ್ರಾಮಗಳ ಸರಿಸುಮಾರು ಹತ್ತು ಸಾವಿರ ಮೀನುಗಾರರು ಈ ಬಂದರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಬಂದರು ಚಟುವಟಿಕೆ ಆರಂಭಿಸುವ ಮೂಲಕ ಸ್ಥಳೀಯ 1200ಕ್ಕೂ ಅಧಿಕ ಮೀನುಗಾರ ಕಾರ್ಮಿಕರಿಗೆ ಪ್ರತ್ಯಕ್ಷವಾಗಿ, 4800 ಮಂದಿಗೆ ಪರೋಕ್ಷವಾಗಿ ಪ್ರಯೋಜನ ಲಭಿಸಲಿದೆ. ಮೀನುಗಾರಿಕೆ ಸಂಬಂಧ ಮಾರಾಟ, ರಫ್ತು ಸಂಬಂಧಿ ವಲಯಗಳ ಮಂದಿಗೆ ಉದ್ಯೋಗಾವಕಾಶ ಅಧಿಕಗೊಳ್ಳಲಿವೆ.

ಕೇಂದ್ರ ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಮುಖ್ಯ ಅತಿಥಿಯಾಗಿದ್ದರು.. ರಾಜ್ಯ ಮೀನುಗಾರಿಕೆ ಸಚಿವೆ ಮೆರ್ಸಿ ಕುಟ್ಟಿಯಮ್ಮ ಅಧ್ಯಕ್ಷತೆ ವಹಿಸಿದರು. ಕಂದಾಯ ಸಚಿವ ಇ.ಚಂದ್ರಶೇಖರನ್, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ಸಿ.ಕಮರುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *