Header Ads
Breaking News

ಮಂಜೇಶ್ವರ : ಟೈಲರಿಂಗ್ ಅಂಗಡಿ ಬೆಂಕಿಗಾಹುತಿ

ಉದ್ಯಾವರ ಮಾದ ಪರಿಸರ ಸೂಪಿ ಹಾಜಿಯವರ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಟೈಲರಿಂಗ್ ಅಂಗಡಿಯೊಂದು ಸುಟ್ಟು ಭಸ್ಮವಾಗಿದೆ. ಉದ್ಯಾವರ ಗುತ್ತು ನಿವಾಸಿ ತನಿಯಪ್ಪ ಎಂಬವರ ಮಾಲಕತ್ವದಲ್ಲಿರುವ ಅಮರ್ ಟೈಲರ್ಸ್ ಎಂಬ ಹೆಸರಿನಲ್ಲಿ ಕಾರ್ಯಾಚರಿಸುತಿದ್ದ ಅಂಗಡಿ ಬೆಂಕಿಗಾಹುತಿಯಾಗಿದೆ. ಪರಿಸರವಾಸಿಗಳಿಗೆ ಹೊಗೆ ಬರುವುದನ್ನು ಕಂಡಾಗ ಅಂಗಡಿ ಒಳಗಿನಿಂದ ಉರಿಯುತ್ತಿರುವುದು ಗಮನಕ್ಕೆ ಬಂದಿದೆ. ಬಳಿಕ ಮಾಲಕ ಬಂದು ಅಂಗಡಿ ಶಟರ್ ತೆರೆಯುವಾಗ ಒಳಗಿದ್ದ ಮೂರು ಮಿಶನ್ ಬಟ್ಟೆ ಬರೆ ಹಾಗೂ ದಾಖಲೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಸುಮಾರು ಎರಡು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ಬೆಂಕಿಗೆ ಕಾರಣವೆಂದು ಶಂಕಿಸಲಾಗಿದೆ. ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Related posts

Leave a Reply

Your email address will not be published. Required fields are marked *