Header Ads
Breaking News

ಮಂಜೇಶ್ವರ ತ್ಯಾಜ್ಯಮುಕ್ತಗೊಳಿಸಲು ಅಳವಡಿಸಿದ ಸಿಸಿ ಕ್ಯಾಮರಾ ನಿಷ್ಕ್ರಿಯ : ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಬಿಸಾಡುವುದು ಮತ್ತೆ ಸಕ್ರೀಯ

ಮಂಜೇಶ್ವರ: ಮಂಜೇಶ್ವರದ ಪರಿಸರದ ಸಾರ್ವಜನಿಕ ಸ್ಥಳ ಹಾಗೂ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಬಿಸಾಡುತ್ತಿರುವ ತ್ಯಾಜ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಜಿಲ್ಲಾಧಿಕಾರಿ ಡಾ. ಸಜಿತ್ ಬಾಬುರವರ ನಿರ್ದೇಶನದ ಪ್ರಕಾರ ಅಳವಡಿಸಲಾದ ಮೂರೂ ಸಿಸಿ ಕ್ಯಾಮರಾಗಳು ಅಧಿಕಾರಿಗಳ ಆಲಸ್ಯದಿಂದ ಇದೀಗ ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ ಈ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡುವುದು ಮತ್ತೆ ಸಕ್ರಿಯವಾಗಿದೆ.ಮಂಜೇಶ್ವರದ ಕರೋಡಾ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯಗಳು ತುಂಬಿ ಗಬ್ಬೆದ್ದು ನಾರುತ್ತಿದ್ದು ಈ ಬಗ್ಗೆ ಊರವರು ಹಲವಾರು ಸಲ ಸ್ಥಳೀಯ ಆಡಳಿತದ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಬಳಿಕ ಪರಿಸರವಾಸಿಗಳು ಗಬ್ಬೆದ್ದು ನಾರುತ್ತಿರುವ ತ್ಯಾಜ್ಯದಿಂದಾಗಿ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಆಸ್ಪತ್ರೆ ಸೇರುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ಈ ನಿಟ್ಟಿನಲ್ಲಿ ಸ್ಥಳೀಯರು ಕಾಸರಗೋಡು ಜಿಲ್ಲಾಧಿಕಾರಿಗೆ ದೂರಿನ ಹಿನ್ನೆಲೆಯಲ್ಲಿ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ಸ್ಥಳವನ್ನು ಸಂದರ್ಶಿಸಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳುವ ಉದ್ದೇಶದಿಂದ ಮೂರೂ ವಿಭಿನ್ನ ಸ್ಥಳಗಳಲ್ಲಿ ಮೂರೂ ಕ್ಯಾಮರಾಗಳನ್ನು ಅಳವಡಿಸುವಂತೆ ನಿರ್ದೇಶಿಸಿದ್ದರು. ನಿರ್ದೇಶನ ನೀಡಿ ಮೂರೂ ತಿಂಗಳು ಕಳೆದ ಬಳಿಕ ಕೊನೆಗೂ ಈ ಸ್ಥಳದಲ್ಲಿ ಕ್ಯಾಮರಾವನ್ನು ಸ್ಥಾಪಿಸಲಾಗಿತ್ತು .

ಆದರೆ ಇಲ್ಲೂ ಕ್ಯಾಮರಾವನ್ನು ಮೂರೂ ದಿಕ್ಕಿನಲ್ಲಿ ಸ್ಥಾಪಿಸದೇ ಒಂದೇ ಭಾಗದಲ್ಲಿ ಮಾತ್ರ ಸ್ಥಾಪಿಸಿದ್ದರು. ಕ್ಯಾಮರಾ ಸ್ಥಾಪಿಸಿದ ಬಳಿಕ ಅಲ್ಪವಾದರೂ ತ್ಯಾಜ್ಯ ಬಿಸಾಡುವುದಕ್ಕೆ ಕಡಿವಾಣ ಹಾಕಲಾಗಿತ್ತು. ಆದರೆ ಇದೀಗ ಕ್ಯಾಮರಾ ಸ್ಥಾಪಿಸಿದ ಸ್ಥಳದಲ್ಲಿ ಕಾಡು ಪೊದರುಗಳು ಬೆಳೆದು ಕ್ಯಾಮರಾ ದೃಶ್ಯವನ್ನು ಸೆರೆ ಹಿಡಿಯಲು ಸಾಧ್ಯವಿಲ್ಲದಂತಾಗಿದೆ. ಈ ನಿಟ್ಟಿನಲ್ಲಿ ಮತ್ತೆ ಈ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡುತ್ತಿರುವುದು ಸಕ್ರಿಯವಾಗಿದೆ. ಸಂಬಂಧಪಟ್ಟವರು ಪರಿಸರವಾಸಿಗಳು ಅದೆಷ್ಟೋ ಸಲ ಮತ್ತೆ ಕೂಡಾ ಈ ವಿಷಯದ ಬಗ್ಗೆ ಗಮನಕ್ಕೆ ತಂದರು ಯಾರು ಇತ್ತ ಕಡೆ ಗಮನಹರಿಸಿಲ್ಲವೆಂದು ಊರವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಇತ್ತ ಕಡೆ ಗಮನ ಹರಿಸುವಂತೆ ಆಗ್ರಹಿಸಿದ್ದಾರೆ.

Related posts

Leave a Reply

Your email address will not be published. Required fields are marked *