Header Ads
Header Ads
Header Ads
Header Ads
Header Ads
Header Ads
Breaking News

ಮಂಜೇಶ್ವರ ಪಣಿಯ ಸರಕಾರಿ ಶಾಲೆಯಲ್ಲಿ ಚಿಣ್ಣರ ಕಲರವ

ಕಾಸರಗೋಡು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಆಶ್ರಯದಲ್ಲಿ ಪಣಿಯೆ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಿಣ್ಣರ ಕಲರವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಹುಮುಖ ಪ್ರತಿಭೆ, ಝೀಕನ್ನಡ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಅನೂಪ್ ರಮಣ್ ಶರ್ಮ ಮಾತನಾಡಿ, ಕಲೆ ಸರ್ವವ್ಯಾಪಿಯಾಗಿದೆ ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಒಬ್ಬ ಕಲಾವಿದ ರೂಪುಗೊಳ್ಳಲು ಸಾಧ್ಯ. ಹೆತ್ತವರ ಪ್ರೋತ್ಸಾಹ ಮತ್ತು ಗುರುಗಳ ಸೂಕ್ತ ಮಾರ್ಗದರ್ಶನ ಪ್ರತಿಯೊಂದು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಉಪಾಧ್ಯಕ್ಷ ಪ್ರೋ.ಶ್ರೀನಾಥ್ ಮಾತನಾಡಿ ಕಲಾ ಮಾತೆಯ ಅನುಗ್ರಹ ಪಡೆಯಲು ಸತತ ಪರಿಶ್ರಮದ ಅಗತ್ಯವಿದೆ. ಚೆನ್ನಾಗಿ ಕಲಿತರೆ ಹೆಚ್ಚು ಅಂಕ ಗಳಿಸುವಂತೆ ಹೆಚ್ಚು ಸಮಯವನ್ನು ಕಲೆಯನ್ನು ಕರಗತ ಮಾಡಲು ಬಳಸಿದವರು ಮುಂದೆ ದೊಡ್ಡ ಕಲಾವಿದರಾಗುತ್ತಾರೆ. ತಾಳ್ಮೆ, ಕ್ಷಮೆ ಹಾಗೂ ಸತತ ಪ್ರಯತ್ನದಲ್ಲಿ ಯಶಸ್ಸಿನ ಗುಟ್ಟು ಅಡಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಉಪಾಧ್ಯಕ್ಷ ಈಶ್ವರ ನಾಯಕ್ ಪೆರುಮುಂಡ, ಜಾನಪದ ಪರಿಷತ್ತು ಸದಸ್ಯೆ ಪುಷ್ಪಾವತಿ ನೆಟ್ಟಣಿಗೆ, ಅಖಿಲೇಶ್ ನಗುಮುಗಂ, ವಿದ್ಯಾಗಣೇಶ್, ಅಕಾಡೆಮಿ ಸದಸ್ಯೆ ರೇಶ್ಮಾ, ಶಾಲಾ ಶಿಕ್ಷಕ ಪುಷ್ಪರಾಜ್ ಮಾಸ್ಟರ್, ಶಿಕ್ಷಕಿಯರಾದ ಉಷಾಕುಮಾರಿ, ಪ್ರವೀಣ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *