Header Ads
Header Ads
Header Ads
Breaking News

ಮಂಜೇಶ್ವರ ಬ್ಲಾಕ್ ಮಟ್ಟದ ಕೇರಳೋತ್ಸವ-2019

ಮಂಜೇಶ್ವರ : ಮಂಜೇಶ್ವರ ಬ್ಲಾಕ್ ಪಂಚಾಯತ್ ಆಶ್ರಯದಲ್ಲಿ ನಡೆದ ಕೇರಳೋತ್ಸವದ ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ವೇದಿಕೆಯಲ್ಲಿ ಸಮಾಪ್ತಿಗೊಂಡಿತು. ಬ್ಲಾಕ್ ಪಂ. ಉಪಾಧ್ಯಕ್ಷೆ ಮಮತ ದಿವಾಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಬ್ಲೋಕ್ ಪಂಚಾಯಿತು ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೇರಳೋತ್ಸವದಂತಹ ಕಾರ್ಯಕ್ರಮಗಳು ನಾಡಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುದರೊಂದಿಗೆ, ಹೊಸ ಪ್ರತಿಭೆಗಳನ್ನು ಗುರುತಿಸುವಲ್ಲಿಯೂ ಸಫಲವಾಗುತ್ತಿದೆ. ಕೇರಳೋತ್ಸವದಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಯುವ ಮಂದಿ ಭಾಗವಹಿಸಿ ಯಶಸ್ವಿಗೊಳಿಸಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭ ಪುಟ್ಬಾಲ್, ಕ್ರಿಕೆಟ್, ಶಟಲ್ ಮೊದಲಾದ ಕ್ರೀಡೆಗಳಲ್ಲಿ ವಿಜಯಗಳಿಸಿದ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭ ಜನಪ್ರತಿನಿಧಿಗಳಾದ ಮುಸ್ತಫ ಉದ್ಯಾವರ, ಶಾಹುಲ್ ಹಮೀದ್, ಹಸೀನ, ಮಿಸ್ಬಾನಾ, ಪ್ರಸಾದ್ ರೈ, ಅಸಿಸ್ಟಂಟ್ ಬಿ ಡಿ ಒ ನೂತನ ಕುಮಾರಿ, ಬ್ಲೋಕ್ ಕಾರ್ಯದರ್ಶಿ ಸುರೇಂದ್ರ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *