Header Ads
Header Ads
Breaking News

ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ದುರಾವಸ್ಥೆ : ಯೂತ್ ಲೀಗಿನಿಂದ ಹೆದ್ದಾರಿ ತಡೆದು ಪ್ರತಿಭಟನೆ

ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿಯ ದುರಾವಸ್ಥೆಯನ್ನು ಕಂಡೂ ಕಾಣದಂತೆ ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ದ ಆಕ್ರೋಶನ್ನು ವ್ಯಕ್ತಪಡಿಸಿ ಯೂತ್ ಲೀಗ್ ಮಂಜೇಶ್ವರ ಪಂ. ಸಮಿತಿಯಿಂದ ಪ್ರತಿಭಟನೆ ನಡೆಸಿದರು.
ಯೂತ್ ಲೀಗ್ ರಾಜ್ಯ ಕಾರ್ಯದರ್ಶಿ ಎಕೆಎಂ ಅಶ್ರಫ್ ಪ್ರತಿಭಟನೆಗೆ ನೇತೃತ್ವ ನೀಡಿದ್ದರು.ಬಳಿಕ ಮಾತನಾಡಿದ ಅವರು ರಸ್ತೆಯೆಲ್ಲಾ ಇಂದು ತೋಡಾಗಿ ಪರಿಣಮಿಸಿದೆ. ಇನ್ನೂ ಅಧಿಕಾರಿಗಳು ಸಾರ್ವಜನಿಕರ ಕ್ಷಮೆಯನ್ನು ಪರೀಕ್ಷಿಸುವುದಾದರೆ ಅದನ್ನು ನಿಮ್ಮಿಂದ ತಡೆಯಲು ಸಾಧ್ಯವಿಲ್ಲ. ನಾಗರಿಕರೊಂದಿಗೆ ಯೂತ್ ಲೀಗ್‌ನ ಎಲ್ಲಾ ಕಾರ್ಯಕರ್ತರು ಮುಂದಿನ ಸಾಲಿನಲ್ಲಿರುವರು. ರಸ್ತೆಯಲ್ಲಿ ವಾಹನಗಳು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಇದಕ್ಕೊಂದು ಪರಿಹಾರ ಕಲ್ಪಿಸಬೇಕಾಗಿದೆ ಎಂದು ಹೇಳಿದರು.
ಪಂಚಾಯತಿ ಘಟಕದ ಅಧ್ಯಕ್ಷ ಮುಕ್ತಾರ್ ಎ ಅಧ್ಯಕ್ಷತೆ ವಹಿಸಿದ್ದರು. ಯೂತ್ ಲೀಗ್ ಮಂಡಲಾಧ್ಯಕ್ಷ ಸೈಫುಲ್ಲಾ ತಂಙಲ್, ಮುಸ್ತಫಾ ಉದ್ಯಾವರ, ಅಬ್ದುಲ್ಲ ಗುಡ್ಡೆಕೇರಿ ಮೊದಲಾದವರು ಹಾಜರಿದ್ದರು.

Related posts

Leave a Reply

Your email address will not be published. Required fields are marked *