Header Ads
Header Ads
Breaking News

ಮಂಜೇಶ್ವರ: ವ್ಯಾಪಾರಿಗಳಿಂದ ವನಮಹೋತ್ಸವ ಆಚರಣೆ

ಮಂಜೇಶ್ವರ: ಕೇರಳ ವ್ಯಾಪಾರಿ ಏಕೋಪನ ಸಮಿತಿಯ ಮಂಜೇಶ್ವರ ಘಟಕದ ವತಿಯಿಂದ ವನ ಮಹೋತ್ಸವ ಆಚರಿಸಲಾಯಿತು. ಮಂಜೇಶ್ವರ ವ್ಯಾಪಾರ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಸಂಘಟನೆಯ ಮಂಜೇಶ್ವರ ಘಟಕದ ಅಧ್ಯಕ್ಷ ಬಶೀರ್ ಕನಿಲರವರು ಸಂಘಟನೆಯ ಸದಸ್ಯರಿಗೆ ಸಸಿಯನ್ನು ವಿತರಿಸಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಯಾವುದೇ ರಾಜಕೀಯ ಹಾಗೂ ಜಾತಿ ಮತ ಬೇಧವಿಲ್ಲದೆ ಸಮಾಜದಲ್ಲಿ ಒಟ್ಟಾಗಿ ನಿಂತು ತನ್ನ ಸೇವೆಯನ್ನು ವ್ಯಾಪಾರಿಗಳಿಗೆ ಮಾತ್ರವಲ್ಲ ಸಮಾಜ ಸೇವೆಗೂ ಮೀಸಲಿಡುವ ಏಕೈಕ ಸಂಘಟನೆಯಾಗಿದೆ ವ್ಯಾಪಾರಿ ಸಂಘಟನೆ. ಈ ತನಕ ಸಂಘಟನೆಯ ಕಾರ್ಯ ಚಟುವಟಿಕೆಗಳನ್ನು ವ್ಯಾಪಾರಿ ಸಂಘಟನೆಯ ವ್ಯಾಪ್ತಿಯಲ್ಲಿ ಮಾತ್ರ ಮೀಸಲಿರಿಸದೆ ಸಮಾಜಕ್ಕೂ ವಿಸ್ತರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ನಾಲ್ಕು ನೂರ ಎಂಭತ್ತು ಸದಸ್ಯರಿಗೆ ಸಸಿಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನೇತಾರರಾದ ಆರಿಫ್ ಮಚ್ಚಪ್ಪಾಡಿ, ಹಮೀದ್ ಹೊಸಂಗಡಿ, ದಯಾನಂದ ಬಂಗೇರ ಹಸೈನಾರ್ ಕುಂಜತ್ತೂರು, ಮಹಿಳಾ ವಿಂಗ್ ಅಧ್ಯಕ್ಷೆ ಕುಮುದಾ, ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Related posts

Leave a Reply

Your email address will not be published. Required fields are marked *