Header Ads
Header Ads
Breaking News

ಮಂಜೇಶ್ವರ : ಸಮುದ್ರ ಪಾಲಾದ ಬಂದರು ರಸ್ತೆ

ಮಂಜೇಶ್ವರದಲ್ಲಿ ನಿರ್ಮಾಣವಾಗುತ್ತಿರುವ ಬಂದರು ರಸ್ತೆ ಸಮುದ್ರ ಪಾಲಾಗಿದೆ. ಸಮಾರು 49 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಉದ್ಘಾಟನಾ ನಡೆಸಲು ಸಿದ್ಧತೆ ನಡೆಸುತ್ತಿದ್ದರು. ಅಷ್ಟರಲ್ಲೇ ರಸ್ತೆ ಸಮುದ್ರ ಪಾಲಾಗಿದೆ.ರಸ್ತೆ ಸಮುದ್ರಪಾಲಾಗಲು ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.49 ಕೋಟಿ ರೂ. ವೆಚ್ಚದಲ್ಲಿ ಮಂಜೇಶ್ವರದಲ್ಲಿ ನಿರ್ಮಾಣವಾಗುತ್ತಿರುವ ಬಂದರು ರಸ್ತೆ ಸಮುದ್ರಪಾಲಾಗಿದೆ. ಕಳಪೆ ಕಾಮಗಾರಿಯೇ ರಸ್ತೆ ಸಮುದ್ರ ಪಾಲಾಗಲು ಕಾರಣವೆಂಬುದಾಗಿ ಪರಿಸರವಾಸಿಗಳು ಆರೋಪಿಸುತಿದ್ದಾರೆ. ಕಳಪೆ ಮಟ್ಟದ ಕಾಮಗಾರಿ ನಡೆಯುತ್ತಿರುವಾಗ ಇಂಜಿನಿಯರ್ ಸ್ಥಳದಲ್ಲಿ ಇರಲಿಲ್ಲವೇ ಎಂಬುದು ಇಲ್ಲಿಯ ಸ್ಥಳೀಯರ ಹಾಗೂ ಮೀನು ಕಾರ್ಮಿಕರ ಪ್ರಶ್ನೆ. ಮಾತ್ರವಲ್ಲ ಈ ರಸ್ತೆಗೆ ಆಡಳಿತ ಸಮಿತಿ ಒಪ್ಪಗೆ ನೀಡಿದ್ದಾದರೂ ಹೇಗೆ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ.

ಮಂಜೇಶ್ವರದ ಬಂದರಿಗೆ 2014 ಫೆಬ್ರವರಿಯಲ್ಲಿ ಶಿಲಾನ್ಯಾಸ ಮಾಡಲಾಗಿತ್ತು. ಬಳಿಕ ತಾಂತ್ರಿಕ ಸಮಸ್ಯೆಯ ಹೆಸರಿನಲ್ಲಿ 2015 ರ ತನಕ ಈ ಕಾಮಗರಿ ಮೊಟಕುಗೊಂಡಿತ್ತು. 71,500 ಕ್ಯೂಬಿಕ್ ಮಟರ್ ಡ್ರಜ್ಜಿಂಗ್, 600 ಸ್ಕ್ವೇರ್ ಮೀಟರ್ ವಿಸ್ತೀರ್ಣದ ಏಲಂ ಕೊಠಡಿ, 250 ಮೀಟರ್ ಅಣೆಕಟ್ಟು, 320 ಸ್ಕ್ವೇರ್ ಮೀಟರಿನ ಲೋಡಿಂಗ್ ಏರಿಯಾ ಎಂಬಿವು ಸೇರಿದಂತೆ ಬಂದರಿಗೆ ಮೊತ್ತ 48.8 ಕೋಟಿ ರೂ. ವೆಚ್ಚ. ಇದರ ಜೊತೆಯಾಗಿ ವರ್ಕ್ ಶಾಪ್ ಪಾರ್ಕಿಂಗ್ ಏರಿಯಾ,  ಶೌಚಾಲಯ, ಕುಡಿಯುವ ನೀರು, ಗೇಟ್ ಹೌಸ್, ಕ್ಯಾಂಟೀನ್ ನಿರ್ಮಾಣ ಅಂತಿಮ ಹಂತದಲ್ಲಿದೆ. ಸತ್ತ ಆವರಣಗೋಡೆಗಳ ನಿರ್ಮಾಣ ಪೂರ್ತಿಯಾಗಿದೆ. ಇಲ್ಲಿಯ ಕಾಮಗಾರಿಗಳನ್ನು ವೀಕ್ಷಿಸುವಾಗ ಈ ಬಂದರು ಉದ್ಘಾಟನೆ ದಿನದವರೆಗದರೂ ಇದೇ ರೀತಿಯಲ್ಲಿ ಇದ್ದರೆ ಸಾಕಿತ್ತೆಂಬುದು ಸ್ಥಳೀಯರ ಹೇಳಿಕೆ

Related posts

Leave a Reply