Header Ads
Header Ads
Breaking News

ಮಂಜೇಶ್ವರ ಸೇವಾ ಸಹಕಾರಿ ಸಂಘಗಳ ನೇತೃತ್ವದಲ್ಲಿ ಗೇರು ಸಸಿ ವಿತರಣೆ

ಮಂಜೇಶ್ವರ: ವಿಶ್ವ ಪರಿಸರ ದಿನಾಚರಣೆಯಂಗವಾಗಿ ಕೇರಳದ ಪ್ರಾಕೃತಿಕ ಸಮತೋಲನ ಕಾಪಾಡಿಕೊಳ್ಳಲು ಆಹಾರ ಭದ್ರತೆ ಖಾತರಿಗೊಳಿಸುವ ಉದ್ದೇಶದಿಂದ ತೀಮ್ಸ್ ಟ್ರೀಸ್ ಆಫ್ ಕೇರಳ ಎಂಬ ಹೆಸರಲ್ಲಿ ಕೇರಳ ಸರಕಾರ ಸಹಕಾರಿ ಇಲಾಖೆ ಒಂದು ಬೃಹತ್ ಯೋಜನೆ ಜಯಾರಿಗೊಳಿಸುತ್ತಾ ಇದೆ. ಇದರ ಅಂಗವಾಗಿ ಮಂಜೇಶ್ವರ ಸೇವಾ ಸಹಕಾರಿ ಸಂಘಗಳ ನೇತೃತ್ವದಲ್ಲಿ ಗೇರು ಸಸಿ ವಿತರಣೆ ನಡೆಯಿತು.

ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಆವರಣದಲ್ಲಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಕೆಸಿ ಗೋಪಾಲರವರು ಬ್ಯಾಂಕಿನ ಮಾಜಿ ಅಧ್ಯಕ್ಷ ಅನಂತರವರಿಗೆ ಸಸಿ ವಿತರಣೆ ಮಾಡಿ ಉದ್ಘಾಟಿಸಿದರು. ಬಳಿಕ ಬಿವಿ ರಾಜನ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕೂಡಾ ಕೆ ರಾಜಗೋಪಾಲ್ರವರೇ ಉದ್ಘಾಟಿಸಿದರು. ಈ ಸಂದರ್ಭ ಕೃಷಿ ಸಾಲ ಕಿಸಾನ್ ಕ್ರೆಡಿಟ್ ಕಾರ್ಡನ್ನು ಕೂಡಾ ಫಲಾನುಭವಿಗಳಿಗೆ ವಿತರಿಸಲಾಯಿತು. ಕೃಷಿ ಸಾಲ ಕ್ರೆಡಿಟ್ ಕಾರ್ಡ್ ಯೋಜನೆ ಬಗ್ಗೆ ಜಿಲ್ಲಾ ಬ್ಯಾಮ್ಕ್ ಕೃಷಿ ಅಧಿಕಾರಿ ಪ್ರವೀಣ್ ಕುಮಾರ್ ಸಮಗ್ರ ಮಾಹಿತಿಯನ್ನು ನೀಡಿದರು . ಕಾರ್ಯಕ್ರಮದಲ್ಲಿ ಬ್ಯಾಆಂಕ್ ಕಾರ್ಯದರ್ಶಿ ಕಾರ್ಯದರ್ಶಿ ರಾಜನ್ ನಾಯರ್, ಸುಪ್ರಿಯಾ ಶೆಣೈ, ಜಾನ್ಸನ್ ಸಿಜೆ, ಸುನಿಲ್ ಕುಮಾರ್, ಕಾಡರ್ ಡಾಕ್ಟರ್ ಮೊದಲಾದವರು ಉಪಸ್ಥರಿದ್ದರು.

Related posts

Leave a Reply

Your email address will not be published. Required fields are marked *