Header Ads
Breaking News

ಮಂಜೇಶ್ವರ : ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ

ಹಲವು ಬೇಡಿಕೆಗಳನ್ನು ಇಟ್ಟು ಸ್ಟೇಟ್ ಎಂಪ್ಲಾಯ್ಸ್ ಮತ್ತು ಟೀಚರ್ಸ್ ಆರ್ಗನೈಜೇಶನ್ ಇದರ ಆಶ್ರಯದಲ್ಲಿ ಮಂಜೇಶ್ವರ ಸಬ್ ಟ್ರಶರಿ ಮುಂಭಾಗದಲ್ಲಿ ಧರಣಿ ನಡೆಯಿತು.

ಸಂಬಳ ಪರಿಷ್ಕರಣೆ ಜಾರಿಗೊಳಿಸಬೇಕು, ರಜೆರಹಿತ ಆದೇಶ ರದ್ದು ಮಾಡಬೇಕು, ಸಂಬಳ ಕಡಿತ ಕ್ರಮ ಕೊನೆಗೊಳಿಸಬೇಕು, ಸುನಿಲ್ ಮಾಣಿ ಸಮಿತಿ ವರದಿಯನ್ನು ಕಡೆಗಣಿಸಬೇಕು ಮುಂತಾದ ಬೇಡಿಕೆಗಳನ್ನೊಡ್ಡಿ ಪ್ರತಿಭಟನೆ ಮಾಡಲಾಯಿತು.

ಧರಣಿಯನ್ನು ಉದ್ದೇಶಿಸಿ ಮಾತನಡಿದ ಕಾಸರಗೋಡು ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹμರ್Áದ್ ವರ್ಕಾಡಿ, ಮಹಾಮಾರಿ ಕೊರೋನಾ ವೈರಸ್‍ನಿಂದಾಗಿ ಇಡೀ ನಾಡು ತತ್ತರಿಸಿರುವಾಗ, ತಮ್ಮ ಜೀವವನ್ನು ಲೆಕ್ಕಿಸದೇ ಸಮಾಜದ ಒಳಿತಿಗಾಗಿ ದುಡಿಯುವ ಸರಕಾರೀ ನೌಕರರ ಮೇಲೆ ಸರಕಾರದ ಪ್ರಹಾರ ಖಂಡನೀಯ, ನೌಕಕರ ಸಂಬಳ ಕಡಿತಗೊಳಿಸಿ, ಖಜಾನೆ ತುಂಬಿಸುವ ಸರಕಾರದ ಅನೀತಿ ಕೊನೆಗೊಳಿಸಬೇಕೆಂದು ಅವರು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಸೆಟೋ ಮಂಜೇಶ್ವರ ತಾಲೂಕು ಸಮಿತಿ ಅಧ್ಯಕ್ಷ ಸುಜಯನ್ ಎನ್ ಜಿ ಓ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ವಿ.ದಾಮೋದರನ್, ಗಜೆಟೆಡ್ ಆಫೀಸ್ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಮಾಯಿಲ ನಾಯಿಕ್, ಮತ್ತಿತರರು ಭಾಗಿಯಾಗಿದ್ರು.

Related posts

Leave a Reply

Your email address will not be published. Required fields are marked *