
ಸುಳ್ಯ:ಗ್ರಾಮ ಪಂಚಾಯತ್ ಚುನಾವಣೆಯ ಮೊದಲ ಹಂತದ ಚುನಾವಣೆ ಯಶಸ್ವಿಯಾಗಿ ನಡೆದಿದೆ. ಇದೀಗ ಎರಡನೇ ಹಂತದ ಚುನಾವಣೆ ಡಿಸೆಂಬರ್ 27ರಂದು ನಡೆಯಲಿದ್ದು ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಮಂಡೆಕೋಲು ಗ್ರಾಮ ಪಂಚಾಯತ್ನ ನಾಲ್ಕನೇ ವಾರ್ಡಿನ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ಕೆದ್ಕಾರ್ ನಾರಾಯಣ, ಸಾಮಾನ್ಯ ಮಹಿಳೆ ದಿವ್ಯಲತಾ ಚೌಟಾಜೆ, ಅನುಸೂಚಿತ ಜಾತಿ ಉದ್ದಂತಡ್ಕ ಕುಶಲ ಪರ ಬಿಜೆಪಿ ಶಕ್ತಿಕೇಂದ್ರದ ಕಾರ್ಯಕರ್ತರು ಮತ ಪ್ರಚಾರ ಕೈಗೊಂಡರು. ಉದ್ದಂತಡ್ಕ, ಕುಕ್ಕೆಟ್ಟಿ, ಪೇರಾಲು, ಮತ್ತು ಭಟ್ಲಿಮನೆಗಳ ಪರಿಸರದಲ್ಲಿ ಮನೆ ಮನೆಗೆ ತೆರಳಿ ಇಂದು ಮತಯಾಚಿಸಿದರು. ಈ ಸಂದರ್ಭ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಜಯರಾಜ್ ಕುಕ್ಕೆಟ್ಟಿ, ಹಾಗೂ ಸದಸ್ಯರುಗಳು ಜೊತೆಗೂಡಿ ಮತಯಾಚಿಸಿದರು. ಡಿಸೆಂಬರ್ 27ರಂದು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಪೇರಾಲಿನಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ಮತದಾನ ನಡೆಯಲಿದೆ.