Breaking News

ಮಂತ್ರಿ ರೈಗೆ ಮುಂಬೈಯಿಂದ ಬೆದರಿಕೆ ಕರೆ, ಚುನಾವಣೆ ಸಮಯದಲ್ಲಿ ನೋಡಿಕೊಳ್ಳುತ್ತೇವೆ

ಕಲ್ಲಡ್ಕ ಪ್ರಭಾಕರ ಭಟ್ಟರ ವಿರುದ್ಧ ದ. ಕ. ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡದಂತೆ ಎಚ್ಚರಿಕೆ ನೀಡುವ ಕರೆಯೊಂದು ಮುಂಬೈಯಿಂದ ಬಂದಿದ್ದು, ಕರೆ ಮಾಡಿದಾತ ಪ್ರಭಾಕರ ಭಟ್‌ರನ್ನು ನಮ್ಮ ಶಕ್ತಿ ಎಂದು ಹೇಳಿದ್ದು. ಅವರ ವಿರುದ್ಧ ಹೇಳಿಕೆ ಕೊಡುವ ನಿಮಗೆ ಪಾಠ ಕಲಿಸಲು ಚುನಾವಣೆಯ ಸಮಯದಲ್ಲಿ ಬರುತ್ತೇವೆ, ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾನೆ.
ನೇರವಾಗಿ ರಮಾನಾಥ ರೈಯವರ ನಂಬರ್‌ಗೆ ಕರೆ ಮಾಡಿದಾತ ತನ್ನ ಹೆಸರು ಹೇಳಿಲ್ಲ. ಬದಲಿಗೆ ಅಣ್ಣಾ ನಾನು ಮುಂಬೈಯಿಂದ ಎಂದು ಮಾತು ಆರಂಭಿಸಿದ್ದು ನಿಮ್ಮ ಕಾಂಗ್ರೆಸ್‌ನಲ್ಲೇನಾದರೂ ಪ್ರಾಬ್ಲಮ್ ಇದೆಯಾ ಹಿಂದುಗಳನ್ನೇಕೆ ಬೈಯ್ಯುತ್ತಿದ್ದೀರಿ. ಅವರೊಬ್ರಿದ್ದಾರೆ ಉಳ್ಳಾಲದವರು ಯು. ಟಿ. ಖಾದರ್ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಅಂತಾರೆ. ನೀವು ಪ್ರಭಾಕರ ಭಟ್ಟರನ್ನು ಜೈಲ್‌ಗೆ ಕಳುಹಿಸುವ ಪ್ಲ್ಯಾನ್ ಮಾಡುತ್ತಿದ್ದೀರಿ, ಏನೆಂದುಕೊಂಡಿದ್ದೀರಿ ನೀವು. ಪ್ರಭಾಕರ ಭಟ್ಟರ ವಿರುದ್ಧ ಮಾತನಾಡುವ ಮುನ್ನ ಎಚ್ಚರ, ಅವರು ನಮ್ಮ ಶಕ್ತಿ. ಟೆರರಿಸ್ಟ್ ಅಲ್ಲ, ಎಂದು ಕರೆ ಮಾಡಿದಾತ ಹೇಳಿದ್ದರೆ, ರಮಾನಾಥ ರೈ ಮುಂಬೈಯವರಿಗೆ ಯಾಕೆ ಇದೆಲ್ಲ ನಾವೇನು ಮಾತನಾಡಿದ್ದೇವೆ ನಿಮಗೆ ಗೊತ್ತಾ ಎಂದು ಉತ್ತರಿಸಿದ್ದರು.
ವು ಎಲ್ಲರೂ ಬ್ಯಾರಿಗಳಿಗೇ ಸಪೋರ್ಟ್ ಮಾಡುತ್ತೀರಾ, ಅವನೊಬ್ಬನಿದ್ದಾನೆ ರಾಹುಲ್ ಆತನೂ ಬ್ಯಾರಿಯೇ ಎಂದು ಕರೆ ಮಾಡಿದಾತ ಹೇಳಿದ್ದಾರೆ. ರಮಾನಾಥ ರೈ ರಾಹುಲ್ ಬ್ಯಾರಿ ಅಲ್ಲ ಎನ್ನುವ ಪ್ರಯತ್ನದಲ್ಲಿದ್ದಾಗ ಫಿರೋಜ್‌ಖಾನ್ ಯಾರು ಎಂದು ಕರೆ ಮಾಡಿದಾತ ಮರು ಪ್ರಶ್ನೆ ಹಾಕಿದ್ದಾನೆ. ಅಂತೂ ರಮಾನಾಥ ರೈಯವರಿಗೆ ಮಾತನಾಡಲು ಅವಕಾಶವೇ ಇಲ್ಲದಂತೆ ತನ್ನ ಮಾತು ಮುಂದುವರಿಸಿರುವ ಕರೆ ಮಾಡಿದಾತ, ಕಲ್ಲಡ್ಕ ಪ್ರಭಾಕರ ಭಟ್ಟರು ನಮ್ಮ ಶಕ್ತಿ ಎಂದು ಮತ್ತೊಮ್ಮೆ ಹೇಳಿದ್ದ. ಆಗ ರಮಾನಾಥ ರೈ ಅವನೊಬ್ಬ ಕಳ್ಳ ಎಂದಿದ್ದರು. ಕಳ್ಳರಾಗಿದ್ದರೆ ಜೈಲ್‌ನಲ್ಲಿರಬೇಕಿತ್ತು, ಜೈಲ್‌ನಲ್ಲಿ ಯಾರು ಇರುತ್ತಾರೆ ಎಂದು ಮುಂದಿನ ಆರು ತಿಂಗಳಲ್ಲಿ ಗೊತ್ತಾಗುತ್ತದೆ, ಕಳ್ಳರು ಯಾರೆಂದು ಗೊತ್ತಾಗುತ್ತದೆ, ನೀವು ಇದೆಲ್ಲ ಮಾಡುವುದು ಓಟಿಗಾಗಿ ಅಲ್ಲವೆ, ಚುನಾವಣೆ ಬರಲಿ ನಿಮ್ಮನ್ನು ನೋಡಿಕೊಳ್ಳುತ್ತೇವೆ, ಎಂದು ಹೇಳಿದ್ದಾನೆ.
ಇದರ ಮಧ್ಯದಲ್ಲಿ ಅವರು ಮರ್ಡರ್ ಮಾಡಿದ್ದಾರೆ ಎಂಬ ಪ್ರಸ್ತಾಪ ರಮಾನಾಥ ರೈ ಮಾಡುತ್ತಾರೆ, ಮರ್ಡರ್ ಮಾಡಿದ್ದರೆ ಆಗಲೇ ಜೈಲ್‌ಗೆ ಹಾಕಬೇಕಿತ್ತು ಇಲ್ಲಿಯವರೆಗೆ ಕಾಯಬೇಕಾಗಿರಲಿಲ್ಲವಲ್ಲ. ಇನ್ನು ಹೆಚ್ಚು ಸಮಯ ಇಲ್ಲ. ಆರೇ ತಿಂಗಳು ಇರುವುದು. ನಾನು ಆವಾಗ ಕರೆ ಮಾಡುತ್ತೇನೆ ನಿಮಗೆ ಎಂದಿದ್ದಾನೆ.

Related posts

Leave a Reply