Header Ads
Header Ads
Header Ads
Breaking News

ಮಂದಗತಿಯಲ್ಲಿ ಸಾಗುತ್ತಿರುವ ಮತದಾನ : ಬೆಳಿಗ್ಗೆ 9 ಗಂಟೆವರೆಗೆ 10.75ರಷ್ಟು ಮತದಾನ

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆ ಮಂದಗತಿಯಲ್ಲಿ ಸಾಗಿದೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಮತದಾನ ಆರಂಭವಾಗುತಿದಂತೆ ಮತದಾರರು ಸರತಿ ಸಾಲಲ್ಲಿ ನಿಂತು ಮತ ಚಲಾಯಿಸ ತೊಡಗಿದ್ದಾರೆ. ಚುನಾವಣೆ ನಡೆಯುತ್ತಿರುವ 60 ವಾರ್ಡ್‍ಗಳಲ್ಲಿ ಬೆಳಿಗ್ಗೆ 9 ಗಂಟೆಗೆ 10.75 ಶೇಕಡ ಮತದಾನ ನಡೆದಿದೆ. ಈ 60 ವಾರ್ಡ್‍ಗಳಲ್ಲಿ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದು, ಅವರಲ್ಲಿ 27 ಮಂದಿ ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ. ಒಟ್ಟು 3,87,517 ಮತದಾರದ ಪೈಕಿ 1,87,465 ಮಹಿಳೆಯರು, 1,99,989 ಪುರುಷರು ಮತ್ತು 63 ಜನ ಇತರರು ಮತದಾನ ಮಾಡಿ ಮುಂದಿನ ಆಡಳಿತವನ್ನು ಆಯ್ಕೆ ಮಾಡಲಿದ್ದಾರೆ.

Related posts

Leave a Reply

Your email address will not be published. Required fields are marked *