
ಮೂರ್ನಾಲ್ಕು ತಿಂಗಳ ಮಕ್ಕಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೋಲೀಸರು ಮಂಗಳೂರಿನಲ್ಲಿ ಬಂಧಿಸಿದ್ದಾರೆ. ಈತನೊಂದಿಗೆ ಮತ್ತಿಬ್ಬರು ಮಹಿಳೆರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಕುಮಾರ್ ಹೇಳಿದ್ರು. ಈ ಕುರಿತು ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ಮಾತನಾಡಿದ ಅವರು, ಬಂಧಿತ ಆರೋಪಿಯನ್ನು ಮೂಲ್ಕಿ ನಿವಾಸಿ ರಾಯನ್ ಎಂದು ಗುರುತಿಸಲಾಗಿದೆ. ಈತನನ್ನು ಮಂಗಳೂರಿನ ಕದ್ರಿಯ ಹೋಟೆಲ್ ಒಂದರಲ್ಲಿ ಸೆರೆ ಹಿಡಿಯಲಾಗಿದೆ. ಮಗುವನ್ನು ಖರೀದಿಸಿ ಮಾರಾಟ ಮಾಡಿದ ಕವಿತಾ ಮತ್ತು ಕವಿತಾಳಿಂದ ಮಗು ಖರೀದಿಸಿದ ಮರಿಯಮ್ಮಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು. ರಯಾನ್ ಹಾಸನದ ಸುಮಾರು ಐದು ತಿಂಗಳ ಮಗುವನ್ನು ಕಾರ್ಕಳದ ಕವಿತಾರಿಗೆ ಸುಮಾರು 5 ಲ.ರೂ ಗಳಿಗೆ ಮಾರಾಟ ಮಾಡಿದ್ದಾನೆ. ಮಗುವನ್ನು ಖರೀದಿಸಿದ ಕವಿತಾ ಅದನ್ನು ಮತ್ತೆ ಮರಿಯಮ್ಮ ಎಂಬವಳಿಗೆ ಮಾರಾಟ ಮಾಡಿದ್ದಾಳೆ. ಸದ್ಯ ಕವಿತಾ ಮತ್ತು ಮರಿಯಮ್ಮಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.