Header Ads
Header Ads
Breaking News

ಕುಂದಾಪುರದ ಕಾವ್ರಾಡಿಯಲ್ಲಿ ಮಕ್ಕಳ ಮೇಲೆ ಶ್ವಾನಗಳ ದಾಳಿ

ಮನೆಯಂಗಳದಲ್ಲಿ ಮಕ್ಕಳು ಆಟವಾಡುತ್ತಿದ್ದ ವೇಳೆಯಲ್ಲಿ ಶ್ವಾನಗಳು ದಾಳಿ ನಡೆಸಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಮೂವರು ಆಸ್ಪತ್ರೆಗೆ ದಾಖಲಾದ ಘಟನೆ ಕುಂದಾಪುರದ ಕಾವ್ರಾಡಿಯಲ್ಲಿ ನಡೆದಿದೆ.

ಕಾವ್ರಾಡಿ ಗ್ರಾಮ ಕಂಡ್ಲೂರು ನಿವಾಸಿಗಳಾದ ಅದ್ವಿನ್ 4, ಆಯೇಜಾ 3 ಎಂಬವರ ಮೇಲೆ ನಾಯಿ ದಾಳಿ ನಡೆಸಿದ್ದು, ತಪ್ಪಿಸಲು ಬಂದ ಮಹಿಳೆ ಕನಕಾ ಪೂಜಾರಿ (45)ಯವರ ಮೇಲೂ ಶ್ವಾನಗಳು ದಾಳಿ ನಡೆಸಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಜೆ ಮಕ್ಕಳು ಮನೆ ಅಂಗಳದಲ್ಲಿ ಆಟವಾಡುತ್ತಿದ್ದಾಗ ಶ್ವಾನಗಳು ದಾಳಿ ನಡೆಸಿದ್ದು, ಅದರಲ್ಲಿ ಮೂವರಿಗೆ ಕಚ್ಚಿದ್ದು, ಉಳಿದ ಮಕ್ಕಳ ಮೇಲೂ ಪಂಜದಿಂದ ದಾಳಿ ನಡೆಸಿವೆ. ಶ್ವಾನಗಳು ಮಕ್ಕಳ ಮೇಲೆ ದಾಳಿ ನಡೆಸುತ್ತಿರುವುದನ್ನು ಕಂಡ ಪರಿಸರ ನಿವಾಸಿಗಳು ನಾಯಿ ಓಡಿಸಿದ್ದಾರೆ. ಅಷ್ಟರಲ್ಲಿ ಅದ್ವಿನ್, ಆಯೇಜಾ ಎಂಬಿಬ್ಬರು ಮಕ್ಕಳನ್ನು ಕಚ್ಚಿ ಗಾಯಗೊಳಿಸಿದೆ. ಬಿಡಿಸಲು ಬಂದ ಕನಕಾ ಪೂಜಾರಿ ಕೈ ಕಚ್ಚಿ ಎಳೆದಾಡಿದ್ದು, ಹತ್ತಿರದಲ್ಲಿದ್ದವರು ನಾಯಿ ಹೊಡೆದು ಓಡಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಹಿಂದೆ ಈ ಭಾಗದಲ್ಲಿ ಬೀದಿ ಶ್ವಾನಗಳ ಕಾಟವಿರಲಿಲ್ಲ. ಸೇತುವೆ ಬಳಿ ತ್ಯಾಜ್ಯ ಎಸೆಯುವುದರಿಂದ ಶ್ವಾನಗಳ ಹಿಂಡೆ ಇಲ್ಲಿಗೆ ಬರುತ್ತಿದ್ದು, ಅವುಗಳು ಆಹಾರಕ್ಕಾಗಿ ಕಿತ್ತಾಡಿಕೊಳ್ಳುತ್ತವೆ. ಪಂಚಾಯಿತಿ ಎಚ್ಚೆತ್ತು ತ್ಯಾಜ್ಯ ಎಸೆಯುವವರ ವಿರುದ್ದ ಕ್ರಮಕೈಗೊಳ್ಳದಿದ್ದರೆ ಸೇತುವೆ ಬಳಿ ಮತ್ತಷ್ಟು ದುರ್ಘಟನೆ ನಡೆದರೂ ಅಚ್ಚರಿಯಿಲ್ಲ. ತ್ಯಾಜ್ಯ ಎಸೆಯುವವರ ವಿರುದ್ಧ ಗ್ರಾಪಂ ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Related posts

Leave a Reply

Your email address will not be published. Required fields are marked *